Bengaluru 22°C
Ad

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕೇಸ್; ಮಾಸ್ಟರ್‌ಮೈಂಡ್‌ ಸೇರಿ ನಾಲ್ವರ ಬಂಧನ

Areres

ಪಾಟ್ನ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಅಭ್ಯರ್ಥಿಗಳಾಗಿದ್ದು, ಓರ್ವ ದಾನಪುರದ ಪುರಸಭೆಯ ಜೂನಿಯರ್ ಇಂಜಿನೀಯರ್ ಎಂದು ವರದಿಯಾಗಿದೆ.

Ad
300x250 2

ಅನುರಾಗ್ ಯಾದವ್ , ನಿತೀಶ್ ಕುಮಾರ್, ಅಮಿತ್ ಆನಂದ್ ಇವರು ಅಭ್ಯರ್ಥಿಗಳಾಗಿದ್ರೆ, ಸಿಕಂದರ್ ಯದುವೇಂದು ಪುರಸಭೆಯ ನೌಕರನಾಗಿದ್ದಾನೆ. ಪೊಲೀಸರ ಮುಂದೆ ಬಂಧಿತರು ತಪ್ಪನ್ನು ಒಪ್ಪಿಕೊಂಡಿದ್ದ, ಅಮಿತ್ ಆನಂದ್ ಈ ಪ್ರಕರಣದ ಮಾಸ್ಟರ್‌ ಮೈಂಡ್. ಎಬಿಪಿ ಲೈವ್ ವರದಿ ಪ್ರಕಾರ, ಮಾಸ್ಟರ್‌ಮೈಂಡ್ ಅಮಿತ್ ಆನಂದ್, ಲೀಕ್ ಮಾಡಿರುವ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ನೀಡಲು 30 ರಿಂದ 32 ಲಕ್ಷ ರೂಪಾಯಿ ಚಾರ್ಜ್ ಮಾಡಿದ್ದನು. ಅಮಿತ್ ಆನಂದ್ ತಪ್ಪೊಪ್ಪಿಗೆ ಬೆನ್ನಲ್ಲೇ ದೇಶಾದ್ಯಂತ ಅಭ್ಯರ್ಥಿಗಳ ಆಕ್ರೋಶ ವ್ಯಕ್ತವಾಗಿದ್ದು, ಈ ಬಾರಿ ನೀಟ್ ಪರೀಕ್ಷೆ ರದ್ದುಗೊಳಿಸಬೇಕು ಎಂಬ ಕೂಗು ಕೇಳಿ ಬಂದಿದೆ.

ತಪ್ಪೊಪ್ಪಿಗೆ ಬಳಿಕ ಅಮಿತ್ ಆನಂದ್ ನಿವಾಸದ ಮೇಲೆ ದಾಳಿ ನಡೆಸಿದಾಗ, ಆತನ ಮನೆಯಲ್ಲಿ ಸುಟ್ಟ ನೀಟ್ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳು ಲಭ್ಯವಾಗಿವೆ. ಆರೋಪಿ ಈ ಹಿಂದೆಯೂ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತೊಡಗಿಕೊಂಡಿರೋದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ಪೊಲೀಸರು ಇಡೀ ಪರೀಕ್ಷಾ ವ್ಯವಸ್ಥೆ ಮತ್ತು ಅಲ್ಲಿಯ ಭ್ರಷ್ಟಾಚಾರದ ಕುರಿತು ತನಿಖೆ ಆರಂಭಿಸಿದ್ದಾರೆ.

Ad
Ad
Nk Channel Final 21 09 2023
Ad