Ad

“ತಾಯಂದಿರ ಹೆಸರಲ್ಲಿ ಒಂದು ಗಿಡ ನೆಡಿ”: ಮನ್ ಕಿ ಬಾತ್ ನಲ್ಲಿ ಮೋದಿ ಕರೆ

Man Ki Bath

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರು 3ನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ‘ಮನ್ ಕಿ ಬಾತ್’ ಇದಾಗಿದೆ. 4 ತಿಂಗಳ ಬಳಿಕ 111ನೇ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಮೋದಿ, ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Ad
300x250 2

2024ರ ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಿದ ಅವರು ವಿಶ್ವದ ಅತಿ ದೊಡ್ಡ ಚುನಾವಣೆ ಯಶಸ್ವಿಯಾಗಿ ನಡೆಸಿದ ಚುನಾವಣಾ ಆಯೋಗಕ್ಕೆ ಅಭಿನಂದನೆಗಳು. 2024ರ ಲೋಕಸಭಾ ಚುನಾವಣೆ ಬಹಳ ಪ್ರಮುಖವಾಗಿತ್ತು ಎಂದು ಹೇಳಿದ್ದಾರೆ.

ಕೇರಳದ ಛತ್ರಿಗಳ ಪರಂಪರೆ ಬಗ್ಗೆ ಮಾತನಾಡಿದ ಅವರು ಅಟ್ಟಾಪಡಿಯ ಮಹಿಳಾ ಛತ್ರಿ ಸಹಕಾರ ಸಂಘದ ನೇತೃತ್ವದಲ್ಲಿ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ದೇಶದಲ್ಲಿ ಮರಗಳನ್ನು ಬೆಳೆಸುವ, ಗಿಡಗಳನ್ನು ನೆಡುವ ಅಭಿಯಾನಕ್ಕೆ ಒತ್ತು ನೀಡಲಾಗಿದ್ದು, ಪ್ರತಿಯೊಬ್ಬರು ತಾಯಂದಿರ ಹೆಸರಿನಲ್ಲಿ ಒಂದೊಂದು ಗಿಡಗಳನ್ನು ನೆಡಿ ಎಂದು ಹೇಳಿದ್ದಾರೆ.

ಭಾರತೀಯ ಕ್ರೀಡಾಪಟುಗಳ ಪ್ರತಿಭೆ ಇಡೀ ವಿಶ್ವಕ್ಕೆ ಗೊತ್ತಾಗುತ್ತದೆ. ಈ ಬಾರಿ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.

https://twitter.com/i/broadcasts/1mrGmyPmngnGy

Ad
Ad
Nk Channel Final 21 09 2023
Ad