ಉತ್ತರ ಪ್ರದೇಶ : 144 ವರ್ಷದ ನಂತರ ಸುಮಾರು 45 ದಿನಗಳ ಕಾಲ ನಡೆಯಲಿರುವ ವಿಶ್ವದ ಅತಿ ದೊಡ್ಡ ಉತ್ಸವ ಮಹಾ ಕುಂಭ ಮೇಳ 2025 ಆರಂಭವಾಗಿದ್ದು, ಈಗಾಗಲೇ ಲಕ್ಷಾಂತರ ಭಕ್ತರ ದಂಡು ಪ್ರಯಾಗರಾಜ್ ಗೆ ಹರಿದು ಬರುತ್ತಿದೆ.
ಈ ಬಗ್ಗೆ ಪ್ರಧಾನಿ ಮೋದಿಯವರು ಪ್ರತಿಕ್ರಿಯಿಸಿದ್ದು, ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವ ಕೋಟಿಗಟ್ಟಲೆ ಜನರಿಗೆ ಬಹಳ ವಿಶೇಷವಾದ ದಿನ. ಮಹಾ ಕುಂಭ ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಪವಿತ್ರ ಸಂಗಮದಲ್ಲಿ ಅಸಂಖ್ಯಾತ ಜನರನ್ನು ಒಟ್ಟುಗೂಡಿಸುತ್ತದೆ.
ಮಹಾ ಕುಂಭವು ಭಾರತದ ಕಾಲಾತೀತ ಆಧ್ಯಾತ್ಮಿಕ ಪರಂಪರೆಯನ್ನು ಸಾಕಾರಗೊಳಿಸುತ್ತದೆ ಮತ್ತು ನಂಬಿಕೆ ಮತ್ತು ಸಾಮರಸ್ಯವನ್ನು ಆಚರಿಸುತ್ತದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ ಪ್ರಯಾಗರಾಜ್ ಗೆ ಬರುವ ಅಸಂಖ್ಯಾತ ಜನರಿಂದ ಪುಳಕಿತಗೊಂಡು, ಪವಿತ್ರ ಸ್ನಾನ ಮಾಡಿ ಆಶೀರ್ವಾದ ಪಡೆಯುವುದನ್ನು ನೋಡಲು ನನಗೆ ಸಂತೋಷವಾಗಿದೆ. ಎಲ್ಲಾ ಯಾತ್ರಿಕರು ಮತ್ತು ಪ್ರವಾಸಿಗರು ಅದ್ಭುತವಾದ ವಾಸ್ತವ್ಯವನ್ನು ಬಯಸುತ್ತಾರೆ. ಭಕ್ತರೆಲ್ಲರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದು ಪಾವನರಾಗಿ ಎಂದು ಪೋಸ್ಟ್ ಮಾಡಿದ್ದಾರೆ.
ಗಂಗಾ, ಯಮುನಾ ಮತ್ತು ಅಧ್ಯಾತ್ಮಿಕ ಸರಸ್ವತಿ ನದಿಗಳ ಸಂಗಮ ಘಾಟ್ ನಲ್ಲಿ ಲಕ್ಷಾಂತರ ಭಕ್ತರು ಕಿಕ್ಕಿರಿದು ಸೇರಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಸಾದ್ಯತೆಗಳಿವೆ. ಈ ಹಿನ್ನಲೆ ಸಂಗಮ ಘಾಟ್ ನ ಉದ್ದವನ್ನು 12 ಕಿಮೀಗೆ ಹೆಚ್ಚಿಸಲಾಗಿದೆ.
ಇನ್ನು 10 ಸಾವಿರ ಎಕರೆ ಭೂಮಿಯಲ್ಲಿ ಈ ಕುಂಭ ಮೇಳ ನಡೆಯಲಿದ್ದು, ಯಾವುದೇ ಅಹಿತಕರ ಹಾಗೂ ಭದ್ರತೆಯ ದೃಷ್ಟಿಯಿಂದ ಮೇಳ ನಡೆಯುವ ಸ್ಥಳದಲ್ಲಿ 55 ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಜೊತೆಗೆ 45 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಆಯೋಜಿಸಲಾಗಿದೆ.
https://x.com/narendramodi/status/1878639071347761497?