ಲಕ್ನೋ: ಎರಡು ದಿನಗಳ ಹಿಂದೆ ಕಾನ್ಪುರದಲ್ಲಿ ದುಷ್ಕರ್ಮಿಗಳು ರೈಲು ಹಳಿ ಮೇಲೆ ಸಿಲಿಂಡರ್ ಇಟ್ಟು ದುಷ್ಕೃತ್ಯ ನಡೆಸಿದ್ದರು. ಈ ಸಂಬಂಧ ಆರೋಪಿ ಶಾರುಖ್ ಖಾನ್ ನ್ನು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರಕಾರ ಬಂಧಿಸಿದೆ.
ಈತ ಹಳಿಯ ಮೇಲೆ ಎಲ್‌ಪಿಜಿ ಸಿಲಿಂಡರ್, ಮ್ಯಾಚ್‌ಬಾಕ್ಸ್, ಪೆಟ್ರೋಲ್ ತುಂಬಿದ ಬಾಟಲಿ ಮತ್ತು ಅನುಮಾನಾಸ್ಪದ ಬ್ಯಾಗ್ ಅನ್ನು ಟ್ರ್ಯಾಕ್‌ನಲ್ಲಿ ಇರಿಸಿದ್ದನು. ಆರೋಪಿ ಶಾರುಖ್ ಖಾನ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂದು ತಿಳಿದುಕೊಳ್ಳಲು ಯುಪಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾನ್ಪುರದಿಂದ ಭಿವಾನಿಗೆ ಪ್ರಯಾಣಿಸುತ್ತಿದ್ದ ಕಾಳಿಂದಿ ಎಕ್ಸ್ ಪ್ರೆಸ್ ಹಳಿ ಮೇಲಿದ್ದ ಸಿಲಿಂಡರ್ ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಸಿಲಿಂಡರ್ ದೂರಕ್ಕೆ ಹೋಗಿ ಬಿದ್ದು ಸ್ಫೋಟಗೊಂಡಿತ್ತು. ಈ ರೈಲು ಕಾನ್ಪುರದಿಂದ ಕಾಸ್ ಗಂಜ್ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಮುಂಡೇರಿ ಕ್ರಾಸಿಂಗ್ ಬಳಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿತ್ತು. ರೈಲು ಹಳಿಯ ಮೇಲಿದ್ದ ಸಿಲಿಂಡರ್ ನ್ನು ನೋಡಿ ಚಾಲಕ ರಾಜ್ ಕಿಶೋರ್ ರೈಲಿನ ತುರ್ತು ಬ್ರೇಕ್ ಹಾಕಿ ಮುಂದಾಗುವ ದೊಡ್ಡ ಅವಘಡವನ್ನು ತಪ್ಪಿಸಿದ್ದರು.