Ad

ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಟ ಪವನ್ ಕಲ್ಯಾಣ್

ತೆಲುಗು ಪ್ರಸಿದ್ದ ನಟ ಪವನ್‌ ಕಲ್ಯಾಣ್‌ ಇಂದು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಅಧಿಕಾರ ಸ್ವೀಕರಿಸಿರುವ ಕೆಲವು ಫೋಟೋಗಳು ಇದೀಗ ವೈರಲ್‌ ಆಗಿವೆ. ವಿಜಯವಾಡದಲ್ಲಿ ಪವನ್ ಕಲ್ಯಾಣ್ ಅಧಿಕಾರ ವಹಿಸಿಕೊಂಡಿದ್ದು, ಅದಕ್ಕೂ ಮುನ್ನ ದೇವರಿಗೆ ಪೂಜೆ ಮಾಡಿ ಆಪ್ತರ ಸಮ್ಮುಖದಲ್ಲಿ ಅಧಿಕಾರವನ್ನು ವಹಿಸಿಕೊಂಡರು.

ಆಂಧ್ರಪ್ರದೇಶ: ತೆಲುಗು ಖ್ಯಾತ ನಟ ಪವನ್‌ ಕಲ್ಯಾಣ್‌ ಇಂದು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಅಧಿಕಾರ ಸ್ವೀಕರಿಸಿರುವ ಕೆಲವು ಫೋಟೋಗಳು ಇದೀಗ ವೈರಲ್‌ ಆಗಿವೆ. ವಿಜಯವಾಡದಲ್ಲಿ ಪವನ್ ಕಲ್ಯಾಣ್ ಅಧಿಕಾರ ವಹಿಸಿಕೊಂಡಿದ್ದು, ಅದಕ್ಕೂ ಮುನ್ನ ದೇವರಿಗೆ ಪೂಜೆ ಮಾಡಿ ಆಪ್ತರ ಸಮ್ಮುಖದಲ್ಲಿ ಅಧಿಕಾರವನ್ನು ವಹಿಸಿಕೊಂಡರು.

Ad
300x250 2

ಪವನ್ ಕಲ್ಯಾಣ್ ಕೈಯಲ್ಲಿ ಸದ್ಯಕ್ಕೆ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಜಲಸಂಪನ್ಮೂಲ ಖಾತೆ, ಅರಣ್ಯ ಮತ್ತು ಪರಿಸರ ಖಾತೆ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆಗಳಿವೆ.ಪ್ರಸ್ತುತ ನಾಲ್ಕು ಖಾತೆಗಳ ಜವಾಬ್ದಾರಿ ಪವನ್ ಕಲ್ಯಾಣ್ ಹೆಗಲಿಗಿದೆಯಾದರೂ ಮುಂದಿನ ದಿನಗಳಲ್ಲಿ ಕೆಲವು ಖಾತೆಗಳನ್ನು ಹೊಸ ಸಚಿವರಿಗೆ ಪವನ್ ಕಲ್ಯಾಣ್ ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ.

ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದಾಗಲೇ ಉಪ ಮುಖ್ಯಮಂತ್ರಿ ಆಗಿರುವುದು ವಿಷೇಶ.ಜಗನ್​ರ ಸರ್ಕಾರದ ವಿರುದ್ಧ ಪವನ್ ಕಲ್ಯಾಣ್ ಸತತವಾಗಿ ಹೋರಾಟ ನಡೆಸಿ ಅವರನ್ನು ಅಧಿಕಾರದಿಂದ ಇಳಿಸಲು ಸಫಲರಾಗಿದ್ದಾರೆ.

ನಟನಾಗಿ ಎಲ್ಲರ ಮನಗೆದ್ದಿರು ಪವನ್‌ ಇನ್ನು ರಾಜಕೀಯದಲ್ಲಿ ಅದೂ ಉಪಮಖ್ಯಮಂತ್ರಿಯಾಗಿ ಹೇಗೆ ಪ್ರಜೆಗಳ ಮನ ಸೆಳೆಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Ad
Ad
Nk Channel Final 21 09 2023
Ad