ಆಂಧ್ರ ಪ್ರದೇಶ: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬುಧವಾರ ಇಲ್ಲಿನ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ, ಬೆಟ್ಟದ ದೇಗುಲದಲ್ಲಿ ಹಿಂದಿನ ವೈಎಸ್‌ಆರ್‌ಸಿಪಿಯ ಸರ್ಕಾರದ ಅವಧಿಯಲ್ಲಿ ಆಗಿರುವ ಪಾಪಗಳ ಪ್ರಾಯಶ್ಚಿತ್ತಕ್ಕೆ ಕೈಗೊಂಡ 11 ದಿನಗಳ ವ್ರತವನ್ನು (ಪ್ರಾಯಶ್ಚಿತ್ತ ದೀಕ್ಷೆ) ಪೂರ್ಣಗೊಳಿಸಿದರು.
ಪವನ್ ಕಲ್ಯಾಣ್ ಜತೆಗೆ ಅವರ ಪುತ್ರಿಯರಾದ ಆಧ್ಯಾ ಕೊನಿಡೇಲಾ ಮತ್ತು ಪಲೀನಾ ಅಂಜನಿ ಕೊನಿಡೇಲಾ ಜೊತೆಗಿದ್ದರು. ಸನಾತನ ಧರ್ಮ (ಹಿಂದೂ ಧರ್ಮ) ರಕ್ಷಣೆಗಾಗಿ 11 ದಿನಗಳ ವ್ರತ ಕೈಗೊಂಡಿರುವ ಪವನ್ ಕಲ್ಯಾಣ್ ಬುಧವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವ್ರತವನ್ನು ಸಂಪನ್ನಗೊಳಿಸಿದರು ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
Ad