ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ 7 ಭಾರತೀಯ ಸಂಸದರಿಗೆ ಪಾಕಿಸ್ತಾನದ ಹೈಕಮಿಷನ್ ಮಾವಿನಹಣ್ಣುಗಳನ್ನು ಕಳುಹಿಸಿಕೊಟ್ಟಿದೆ.
ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ, ಶಶಿ ತರೂರ್, ಸಮಾಜವಾದಿ ಪಕ್ಷದ ಸಂಸದರಾದ ಮೊಹಿಬ್ಬುಲ್ಲಾ ನದ್ವಿ, ಜಿಯಾ ಉರ್ ರೆಹಮಾನ್ ಬಾರ್ಕ್, ಅಫ್ಜಲ್ ಅನ್ಸಾರಿ, ಇಕ್ರಾ ಚೌಧರಿ ಮತ್ತು ಕಪಿಲ್ ಸಿಬಲ್ ಸೇರಿದಂತೆ ಸಂಸತ್ತಿನ ಬಹು ಭಾರತೀಯ ಸದಸ್ಯರಿಗೆ ಪಾಕಿಸ್ತಾನದ ಹೈಕಮಿಷನ್ ಬುಟ್ಟಿಗಳಲ್ಲಿ ಮಾವಿನ ಹಣ್ಣುಗಳನ್ನು ಕಳುಹಿಸಿದೆ ಎಂಬ ವರದಿಗಳು ತಿಳಿಸಿವೆ.
2015ರ ಈದ್ ಹಬ್ಬದ ಸಮಯದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಇತರ ನಾಯಕರಿಗೆ 10 ಕೆಜಿ ಮಾವಿನ ಹಣ್ಣುಗಳನ್ನು ಕಳುಹಿಸಿದ್ದರು.