Ad

ಅಂಗಾಂಗ ಮಾರಾಟ ಜಾಲ ಪತ್ತೆ: ವೈದ್ಯ ಸೇರಿ 6 ಮಂದಿ ಬಂಧನ

ಮಾನವ ಅಂಗಾಂಗಗಳನ್ನು ಅನಧಿಕೃತವಾಗಿ ಪಡೆದು ಕಸಿ ದಂಧೆ ನಡೆಸುತ್ತಿದ್ದ ಜಾಲವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ವೈದ್ಯರು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ಮಂಗಳವಾರ ವರದಿ ಮಾಡಿದೆ.

ನವದೆಹಲಿ:ಮಾನವ ಅಂಗಾಂಗಗಳನ್ನು ಅನಧಿಕೃತವಾಗಿ ಪಡೆದು ಕಸಿ ದಂಧೆ ನಡೆಸುತ್ತಿದ್ದ ಜಾಲವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ವೈದ್ಯರು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ಮಂಗಳವಾರ ವರದಿ ಮಾಡಿದೆ.

Ad
300x250 2

ಬಾಂಗ್ಲಾದೇಶ ಮೂಲದ ವ್ಯಕ್ತಿ ಈ ಜಾಲದ ಮಾಸ್ಟರ್​ ಮೈಂಡ್​ ಎಂದು ದೆಹಲಿ ಪೊಲೀಸ್ ಆಯುಕ್ತ ಅಮಿತ್ ಗೋಯೆಲ್ ಹೇಳಿದ್ದಾರೆ.ಈ ಪ್ರಕರಣದಲ್ಲಿ ದಾನಿಗಳು ಮತ್ತು ಸ್ವೀಕರಿಸುವವರು ಇಬ್ಬರೂ ಬಾಂಗ್ಲಾದೇಶದರಾಗಿದ್ದಾರೆ.ಈ ದಂಧೆಯಲ್ಲಿರುವ ಎಲ್ಲ ಜನರು ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದಾಗಿ ಶಂಕಿಸಲಾಗಿದೆ.

ರೋಗಿಗಳು ಮತ್ತು ದಾನಿಗಳನ್ನು ವ್ಯವಸ್ಥೆ ಮಾಡುತ್ತಿದ್ದ ರಸೆಲ್ ಎಂಬ ವ್ಯಕ್ತಿಯನ್ನು ನಾವು ಬಂಧಿಸಿದ್ದೇವೆ ಮತ್ತು ಅನಧಿಕೃತವಾಗಿ ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಮಹಿಳಾ ವೈದ್ಯರನ್ನು ಸಹ ಬಂಧಿಸಲಾಗಿದೆ ಎಂದು ಡಿಸಿಪಿ ಗೋಯೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

 

Ad
Ad
Nk Channel Final 21 09 2023
Ad