ನವದೆಹಲಿ : ಸೆ.21 ರಂದು ದೆಹಲಿ ನೂತನ ಸಿಎಂ ಆಗಿ ಅತಿಶಿ ಮರ್ಲೆನಾ ಸಿಂಗ್ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯ ಕಲ್ಕಾಜಿ ಕ್ಷೇತ್ರದ ಶಾಸಕಿ ಅತಿಥಿ ಅತಿಶಿ ದೆಹಲಿಯ ನೂತನ ಸಿಎಂ ಆಗಿ ಆಯ್ಕೆಗೊಂಡಿದ್ದು, ಸಿಎಂ ಕೇಜ್ರಿವಾಲ್ ಈ ಬಗ್ಗೆ ನಿನ್ನೆ ಘೋಷಣೆ ಮಾಡಿದ್ದರು.
ಆಪ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅತಿಶಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು. ಅವರು ಸೆ.21 ರಂದು ದೆಹಲಿ ನೂತನ ಸಿಎಂ ಆಗಿ ಅತಿಶಿ ಮರ್ಲೆನಾ ಸಿಂಗ್ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಅತಿಶಿ ಮರ್ಲೆನಾ ಸಿಂಗ್ ಭಾರತೀಯ ರಾಜಕಾರಣಿ , ರಾಜಕೀಯ ಕಾರ್ಯಕರ್ತೆ ಮತ್ತು ದೆಹಲಿಯ ಕಲ್ಕಾಜಿಯಿಂದ ಶಾಸಕರಾಗಿದ್ದಾರೆ . ಅವರು ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಶಿಕ್ಷಣ , PWD, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಪ್ರಾಥಮಿಕವಾಗಿ ಶಿಕ್ಷಣದ ಸಲಹೆಗಾರರಾಗಿ ಜುಲೈ 2015 ರಿಂದ 17 ಏಪ್ರಿಲ್ 2018 ರವರೆಗೆ ಸೇವೆ ಸಲ್ಲಿಸಿದರು.