ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ರ ಪುರುಷರ ಟೆನಿಸ್ ಸಿಂಗಲ್ಸ್ನಲ್ಲಿಸರ್ಬಿಯಾದ ನೊವಾಕ್ ಜೊಕೊವಿಕ್ ಅವರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ಫಿಲಿಪ್-ಚಾಟ್ರಿಯರ್ನಲ್ಲಿ ನಡೆದ ಚಿನ್ನದ ಪದಕದ ಪಂದ್ಯದಲ್ಲಿ 37 ವರ್ಷದ ಆಟಗಾರ ಸ್ಪೇನ್ ಕಾರ್ಲೋಸ್ ಅಲ್ಕರಾಜ್ ಅವರನ್ನು 7-6 (7-3), 7-6 (7-2) ಸೆಟ್ಗಳಿಂದ ಸೋಲಿಸಿದರು. ಈ ಮೂಲಕ ಒಲಿಂಪಿಕ್ಸ್ ಟೆನಿಸ್ನ ಅತ್ಯಂತ ಹಿರಿಯ ಚಾಂಪಿಯನ್ ಎನಿಸಿಕೊಂಡರು. 21 ವರ್ಷದ ಅಲ್ಕರಾಜ್ ಗೆ ಅತ್ಯಂತ ಕಿರಿಯ ಒಲಿಂಪಿಕ್ ವಿಜೇತರಾಗುವ ಅವಕಾಶವಿತ್ತು.
ಜೊಕೊವಿಕ್ ಐದು ಬ್ರೇಕ್ ಪಾಯಿಂಟ್ ಗಳನ್ನು ಉಳಿಸಿ ಅಂತಿಮವಾಗಿ ತಮ್ಮ ಸರ್ವ್ ಹಿಡಿತದಲ್ಲಿಟ್ಟುಕೊಂಡು 5-4 ಕ್ಕೆ ಮುನ್ನಡೆದರು. ಹಲವಾರು ಬಾರಿ ನೋವಿನ ಸಮಸ್ಯೆ ಎದುರಿಸಿ ಅದರಿಂದ ಹೊರಕ್ಕೆ ಬಂದರು. ಟೈ-ಬ್ರೇಕರ್ನಲ್ಲಿಯೂ 3-3 ರಲ್ಲಿ ಸಮಬಲದ ಸಾಧನೆ ಬಂತು. ಆದರೆ ಜೊಕೊವಿಕ್ ಸತತ ನಾಲ್ಕು ಅಂಕಗಳನ್ನು ಪಡೆದರು. ಫೋರ್ಹ್ಯಾಂಡ್ ಬಲದೊಂದಿಗೆ ಒಂದು ಗಂಟೆ 34 ನಿಮಿಷಗಳಲ್ಲಿ ಆರಂಭಿಕ ಸೆಟ್ ಗೆದ್ದರು. ಅಲ್ಕರಾಜ್ ತನ್ನ ಎಂಟು ಬ್ರೇಕ್ ಪಾಯಿಂಟ್ ಅವಕಾಶಗಳಲ್ಲಿ ಒಂದನ್ನು ಸಹ ಪರಿವರ್ತಿಸಲು ವಿಫಲಗೊಂಡು ನಿರಾಸೆಗೆ ಒಳಗಾದರು.
ಅಲ್ಕರಾಜ್ 5-4 ರ ಮುನ್ನಡೆಯೊಂದಿಗೆ ಸೆಟ್ ಗೆಲ್ಲುವ ಅವಕಾಶ ಹೊಂದಿದ್ದರು. ಆದರೆ ಜೊಕೊವಿಕ್ ಅವಕಾಶ ಕೊಡದೇ ಆ ಗೇಮ್ ಗೆದ್ದರು. ಹೀಗಾಗಿ ಮೊದಲ ಸೆಟ್ನಂತೆಯೇ ಎರಡನೇಯದೂ ಟೈ-ಬ್ರೇಕರ್ಗೆ ಹೋಯಿತು. ಅಲ್ಕರಾಜ್ ಜೊಕೊವಿಕ್ ಅವರ ಸರ್ವ್ ಅನ್ನು ಮುರಿಯಲು ವಿಫಲಗೊಂಡು ಸೋಲೊಪ್ಪಿಕೊಂಡರು.