Bengaluru 22°C
Ad

ಜೈಲಲ್ಲೇ ದೀಕ್ಷೆ ಪಡೆದ ಕುಖ್ಯಾತ ಭೂಗತ ಪಾತಕಿ !

Prison

ಅಲ್ಮೋರಾ: ಭೂಗತ ಪಾತಕಿಯೊಬ್ಬನಿಗೆ ಸಂತ ದೀಕ್ಷೆ ನೀಡಲಾಗಿದೆ. ಅಷ್ಟೇ ಅಲ್ಲ ಅವನಿಗೆ ಮಠಗಳಿಗೆ ಪೀಠಾಧಿಪತಿಯನ್ನಾಗಿಯೂ ನೇಮಿಸಲಾಗಿದೆ. ಈ ಘಟನೆ ನಡೆದಿದ್ದು ಉತ್ತರಾಖಂಡ್​ದ ಅಲ್ಮೋರಾದಲ್ಲಿ.

ಹೌದು. . . ಅಲ್ಮೋರಾದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಭೂಗತ ಪಾತಕಿ ಪ್ರಕಾಶ್ ಪಾಂಡೆ ಅಲಿಯಾಸ್ ಪಿಪಿ ಪಾಂಡೆಗೆ ಜೈಲಿನಲ್ಲಿಯೇ ದೀಕ್ಷೆ ನೀಡಲಾಗಿದೆಯಂತೆ. ಅಲ್ಲದೇ ಜುನಾ ಅಖಾಡದ ಮಹಾಂತರನ್ನಾಗಿ ನೇಮಿಸಲಾಗಿದೆಯಂತೆ. ಅಲ್ಮೋರಾದ ರಾಣಿಖೇತ್, ಖಾನೌಯ ಗ್ರಾಮದ ಪ್ರಕಾಶ್ ಪಾಂಡೆ ಅಲಿಯಾ ಪಿ.ಪಿ ಪಾಂಡೆ ಛೋಟಾ ರಾಜನ್​​ ಜೊತೆ ಗುರುತಿಸಿಕೊಂಡಿದ್ದ. ಆತನೊಂದಿಗೆ ಹಲವು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಭೂಗತ ಪಾತಕಿ ಪ್ರಕಾಶ್ ಪಾಂಡೆ ತಂದೆ ಓರ್ವ ಸೈನಿಕನಾಗಿದ್ದ. ತಾಯಿ ಚಿಕ್ಕಂದಿಯಲ್ಲಿಯೇ ತೀರಿಕೊಂಡಿದ್ದರಿಂದ ಚಟಗಳ ದಾಸನಾಗಿ ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿದ್ದ ಪ್ರಕಾಶ್ ಪಾಂಡೆ ತೊಂಬತ್ತರ ದಶಕದಲ್ಲಿ ಚೋಟಾ ರಾಜನ್​ನನ್ನು ಭೇಟಿಯಾಗಿದ್ದ. ಅವನ ವಿಶ್ವಾಸ ಗಳಿಸಿ ಛೋಟಾ ರಾಜನ್ ಬಲಗೈ ಎನಿಸಿದ್ದ.

ಛೋಟಾ ರಾಜನ್ ಮತ್ತು ದಾವೂದ್ ನಡುವೆ ಮನಸ್ತಾಪ ಉಂಟಾದಾಗ ದಾವೂದ್ ಅಡಗುತಾಣಗಳ ಮಾಹಿತಿ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದ. ಅಲ್ಲದೇ ದಾವೂದ್​ನನ್ನು ಕೊಲ್ಲಲು ಪಾಕಿಸ್ತಾನಕ್ಕೂ ತೆರಳಿದ್ದ ಎನ್ನಲಾಗ್ತಿದೆ.

ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು ವಿಯೆಟ್ನಾಂನಲ್ಲಿ ಬಂಧಿಸಿ ಅವನನ್ನು ಉತ್ತರಾಖಂಡ್​ಗೆ ಕರೆತಂದಿದ್ದರು. ಆ ಬಳಿಕ ಉತ್ತರಾಖಂಡ್​ನ ವಿವಿಧ ಜೈಲುಗಳಿಗೆ ವರ್ಗಾಯಿಸಲಾಗಿತ್ತು. ಸದ್ಯ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಪ್ರಕಾಶ್ ಪಾಂಡೆಗೆ ಆಗಸ್ಟ್​ನಲ್ಲಿ ಅಲ್ಮೋರಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಇತ್ತೀಚೆಗೆ ಜುನಾ ಅಖಾಡದ ಸಂತರ ಗುಂಪೊಂದು ಆತನಿಗೆ ದೀಕ್ಷೆ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ ಹಲವು ಮಠಗಳ ಉಸ್ತುವಾರಿಯನ್ನೂ ನೀಡಿದ್ದಾರಂತೆ. ಈ ವಿಚಾರ ಉತ್ತರಾಂಡ್​​ದಲ್ಲಿ ಬಿರುಗಾಳಿ ಎಬ್ಬಿಸಿದೆ. ಭೂಗತ ಪಾತಕಿಗೆ ಸಂತ ದೀಕ್ಷೆ ನೀಡಿದ್ದಕ್ಕೆ ಜುನಾ ಅಖಾಡಾ ಮಹಾ ಪೋಷಕ ಶ್ರೀ ಮಹಂತಗಿರಿ ಕಿಡಿಕಾರಿದ್ದಾರೆ. ಇದು ಸಂಪೂರ್ಣ ತಪ್ಪು ಈ ಬಗ್ಗೆ ತನಿಖೆ ಮಾಡಲು ಜುನಾ ಅಖಾಡಾದಿಂದ 7 ಜನರ ಸಮಿತಿ ರಚಿಸಿದ್ದಾರೆ.

Ad
Ad
Nk Channel Final 21 09 2023