Ad

ಇಪ್ಪತ್ತು ವರ್ಷಗಳಲ್ಲಿ ಅಂತರ್ಜಲ ಭಾರೀ ಮಟ್ಟದಲ್ಲಿ ಇಳಿಕೆ

Water

ವದೆಹಲಿ: ಇಪ್ಪತ್ತು ವರ್ಷಗಳಲ್ಲಿ ಅಂತರ್ಜಲ ಭಾರೀ ಮಟ್ಟದಲ್ಲಿ ಇಳಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಉತ್ತರ ಭಾರತದಲ್ಲಿ 2002-2021ರಲ್ಲಿ 450 ಕ್ಯೂಬಿಕ್‌ ಕಿ.ಮೀ. ವ್ಯಾಪ್ತಿಯಲ್ಲಿನ ಅಂತರ್ಜಲ ನಷ್ಟವಾಗಿದೆ. ಹವಾಮಾನದಲ್ಲಿ ಉಂಟಾದ ಬದಲಾ ವಣೆಯ ಪರಿಣಾಮ, ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯಲಿದೆ ಎಂದು ಅಧ್ಯಯನವೊಂದು ಹೇಳಿದೆ.

Ad
300x250 2

ಗಾಂಧಿನಗರ ಐಐಟಿಯ ಭೂ ವಿಜ್ಞಾನ ಮತ್ತು ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ವಿಮಲ್‌ ಮಿಶ್ರಾ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶ ಕಂಡುಕೊಳ್ಳಲಾಗಿದೆ.

ಉತ್ತರ ಭಾರತದಲ್ಲಿ 2 ದಶಕಗಳಲ್ಲಿ ನಷ್ಟವಾದ ನೀರಿನ ಪ್ರಮಾಣ ದೇಶದ ಅತಿದೊಡ್ಡ ಅಣೆಕಟ್ಟು ಮಧ್ಯಪ್ರ ದೇಶದ ಇಂದಿರಾ ಸಾಗರದಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣಕ್ಕಿಂತ 37 ಪಟ್ಟು ಅಧಿಕ ಎಂದು ಅವರು ಅಂದಾಜಿಸಿದ್ದಾರೆ.1951-2021ರಲ್ಲಿ ಜೂನ್‌-ಸೆಪ್ಟೆಂಬರ್‌ವರೆಗೆ ಶೇ.8.5 ಕಡಿಮೆ ಮಳೆಯಾಗಿದೆ.

Ad
Ad
Nk Channel Final 21 09 2023
Ad