ನವದೆಹಲಿ : ಭಾರತದ ಭೂಪ್ರದೇಶದ ಯಾವುದೇ ಭಾಗವನ್ನು ನಾವು ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಮುಸ್ಲಿಂ ಬಾಹುಳ್ಯವುಳ್ಳ ಬೆಂಗಳೂರಿನ ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಾರೆ. ಅದು ಪಾಕಿಸ್ತಾನದಲ್ಲಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾ.ವಿ.ಶ್ರೀಶಾನಂದ ಅವರ ಹೇಳಿಕೆ ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿತ್ತು.
ಈ ವಿಚಾರವಾಗಿ, ತಮ್ಮ ವೈಯಕ್ತಿಕ, ಪೂರ್ವಾಗ್ರಹಗಳು ತಮ್ಮ ಕರ್ತವ್ಯದ ಮೇಲೆ ಪ್ರಭಾವ ಬೀರದಂತೆ ವಕೀಲರು, ನ್ಯಾಯಾಧೀಶರು ನೋಡಿಕೊಳ್ಳಬೇಕು. ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾ.ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಸೂರ್ಯಕಾಂತ್, ಹೃಷಿಕೇಶ್ ರಾಯ್ ಅವರ ಐವರು ಸದಸ್ಯರ ಪೀಠವು ನ್ಯಾ.ವಿ.ಶ್ರೀಶಾನಂದ ಹೇಳಿಕೆಯನ್ನು ಖಂಡಿಸಿ ಕಿವಿ ಮಾತು ಹೇಳಿದೆ.
ನ್ಯಾಯಾಂಗ ನಿರ್ಧಾರ ಕೈಗೊಳ್ಳುವ ಮಾರ್ಗದರ್ಶಿ, ಮೌಲ್ಯಗಳು ಸಂವಿಧಾನದಲ್ಲಿ ಮಾತ್ರವೇ ಇರುತ್ತವೆ ಎಂಬುವುದನ್ನು ನ್ಯಾಯಾಂಗದ ಎಲ್ಲಾ ಪಾಲುದಾರರು ಅರ್ಥೈಸಿಕೊಳ್ಳುವುದು ಅಗತ್ಯವೆಂದು ಸುಪ್ರೀಂಕೋರ್ಟ್ ಹೇಳಿದೆ.