Bengaluru 22°C
Ad

ಬ್ರಹ್ಮೋಸ್‌ ಕ್ಷಿಪಣಿ ಕುರಿತು ಪಾಕ್‌ಗೆ ಮಾಹಿತಿ : ನಿಶಾಂತ್‌ ಅಗರ್ವಾಲ್‌ಗೆ ಜೀವಾವಧಿ ಶಿಕ್ಷೆ!

ಭಾರತದ ಬ್ರಹ್ಮೋಸ್‌ ಕ್ಷಿಪಣಿ ಕುರಿತು ಪಾಕಿಸ್ತಾನಕ್ಕೆ ಮಾಹಿತಿ ನೀಡಿದ ನಿಶಾಂತ್‌ ಅಗರ್ವಾಲ್‌ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈತ ಬ್ರಹ್ಮೋಸ್‌ ಏರೋಸ್ಪೇಸ್‌ ಮಾಜಿ ಎಂಜಿನಿಯರ್‌ ಆಗಿದ್ದು ಮಾಹಿತಿ ಸೋರಿಕೆ ಮಾಡಿದಕ್ಕೆ ನಾಗ್ಪುರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ನವದೆಹಲಿ: ಭಾರತದ ಬ್ರಹ್ಮೋಸ್‌ ಕ್ಷಿಪಣಿ ಕುರಿತು ಪಾಕಿಸ್ತಾನಕ್ಕೆ ಮಾಹಿತಿ ನೀಡಿದ ನಿಶಾಂತ್‌ ಅಗರ್ವಾಲ್‌ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈತ ಬ್ರಹ್ಮೋಸ್‌ ಏರೋಸ್ಪೇಸ್‌ ಮಾಜಿ ಎಂಜಿನಿಯರ್‌ ಆಗಿದ್ದು ಮಾಹಿತಿ ಸೋರಿಕೆ ಮಾಡಿದಕ್ಕೆ ನಾಗ್ಪುರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಬ್ರಹ್ಮೋಸ್‌ ಏರೋಸ್ಪೇಸ್‌ನಲ್ಲಿ ನಿಶಾಂತ್‌ ಅಗರ್ವಾಲ್‌ ಸೀನಿಯರ್‌ ಸಿಸ್ಟಮ್‌ ಎಂಜಿನಿಯರ್‌ ಆಗಿದ್ದರು.ಭೂಮಿ, ಸಮುದ್ರ ಹಾಗೂ ಆಗಸದಿಂದಲೇ ವೈರಿಗಳನ್ನು ಹೊಡೆದುರುಳಿಸುವ ಬ್ರಹ್ಮೋಸ್ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯನ್ನು ಬ್ರಹ್ಮೋಸ್‌ ಏರೋಸ್ಪೇಸ್‌ ಅಭಿವೃದ್ಧಿಪಡಿಸಿದ್ದು, ಇದರ ಕುರಿತು ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡಿದ ಆರೋಪದಲ್ಲಿ ನಿಶಾಂತ್‌ ಅಗರ್ವಾಲ್‌ನನ್ನು 2018ರಲ್ಲಿಯೇ ಬಂಧಿಸಲಾಗಿತ್ತು. ಇದೀಗ ಜೀವಾವಧಿ ಶಿಕ್ಷೆ ನೀಡಿದ್ದು . ಆಫೀಶಿಯಲ್‌ ಸೀಕ್ರೆಟ್ಸ್‌ ಆ್ಯಕ್ಟ್‌ ಅಡಿಯಲ್ಲಿ ನಿಶಾಂತ್‌ ಅಗರ್ವಾಲ್‌ಗೆ 14 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ.

Ad
Ad
Nk Channel Final 21 09 2023
Ad