Bengaluru 23°C
Ad

ಮೋದಿ ಕುಟುಂಬಕ್ಕೆ ಹೊಸ ಸದಸ್ಯೆ : ದೀಪಜ್ಯೋತಿಗೆ ಮುತ್ತಿಡುತ್ತಿರುವ ನಮೋ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸಕ್ಕೆ ಹೊಸ ಸದಸ್ಯೆ ಬಂದಿದ್ದಾರೆ. ಈಕೆಯ ಹೆಸರು ದೀಪಜ್ಯೋತಿ . ಪ್ರಧಾನಿಯವರ ಮನೆಯ ಆವರಣದಲ್ಲಿರುವ ಹಸು ಕರು ಹಾಕಿದ್ದು

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸಕ್ಕೆ ಹೊಸ ಸದಸ್ಯೆ ಬಂದಿದ್ದಾರೆ. ಈಕೆಯ ಹೆಸರು ದೀಪಜ್ಯೋತಿ . ಪ್ರಧಾನಿಯವರ ಮನೆಯ ಆವರಣದಲ್ಲಿರುವ ಹಸು ಕರು ಹಾಕಿದ್ದು, ಆ ಕರುವಿನ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕರುವಿನ ಹಣೆ ಮೇಲೆ ವಿಶಿಷ್ಟವಾದ ಗುರುತು ಇದು, ಇದು ಬೆಳಕಿನ ಸಂಕೇತವನ್ನು ಹೋಲುತ್ತದೆ. ಈ ವಿಶಿಷ್ಟ ವೈಶಿಷ್ಟ್ಯವನ್ನು ಗುರುತಿಸಿ, ಪ್ರಧಾನಿ ಮೋದಿ ಅವರು ಕರುವಿಗೆ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದಾರೆ.

ಪ್ರಧಾನಮಂತ್ರಿಯವರು ಕರುವನ್ನು ಮನೆಯೊಳಗೆ ಕರೆತಂದು ಅದಕ್ಕೆ ಶಾಲು ಹೊದಿಸಿ ಹೂಮಾಲೆ ಹಾಕುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿದ್ದು, ನಮ್ಮ ಗ್ರಂಥಗಳಲ್ಲಿ ಗಾವಃ ಸರ್ವಸುಖ ಪ್ರದಾಃ ಎಂದು ಹೇಳಲಾಗಿದೆ. ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿ  ಕುಟುಂಬಕ್ಕೆ ಹೊಸ ಸದಸ್ಯರೊಬ್ಬರು ಮಂಗಳಕರ ಆಗಮನವಾಗಿದೆ. ಪ್ರಧಾನಿ ನಿವಾಸದಲ್ಲಿ ಪ್ರೀತಿಯ ತಾಯಿ ಹಸು ಹೊಸ ಕರುವಿಗೆ ಜನ್ಮ ನೀಡಿದ್ದು, ಹಣೆಯ ಮೇಲೆ ಬೆಳಕಿನ ಗುರುತು ಇದೆ. ಹಾಗಾಗಿ ಇದಕ್ಕೆ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದೇನೆ ಎಂದಿದ್ದಾರೆ.

Ad
Ad
Nk Channel Final 21 09 2023