Ad

ಲವ್‌ ಜಿಹಾದ್‌ಗೆ ಜೀವಾವಧಿ ಶಿಕ್ಷೆ; ಸಿಎಂ ಹಿಮಂತ್ ಬಿಸ್ವ ಶರ್ಮಾ ಘೋಷಣೆ

Cm Assum

ಗುವಾಹಟಿ: ಅಸ್ಸಾಂನಲ್ಲಿ ‘ಲವ್ ಜಿಹಾದ್’ ಮಾಡಿದರೆ ಅಂಥ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ನೀಡಲಾಗುವುದು ಎಂದಿರುವ ಸಿಎಂ ಹಿಮಂತ ಬಿಸ್ವ ಶರ್ಮ, ಈ ಸಂಬಂಧ ಸರ್ಕಾರ ಶೀಘ್ರ ಕಾನೂನು ರೂಪಿಸಲಿದೆ ಎಂದು ಹೇಳಿದ್ದಾರೆ.

ಭಾನುವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಸಂದರ್ಭದಲ್ಲಿ ‘ಲವ್ ಜಿಹಾದ್’ ಬಗ್ಗೆ ಮಾತನಾಡಿದ್ದೆವು, ಶೀಘ್ರದಲ್ಲೇ ನಾವು ಅಂತಹ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ತರುತ್ತೇವೆ ಎಂದರು.

ಇದೇ ವೇಳೆ, ಹಿಂದೂ-ಮುಸಲ್ಮಾನರ ನಡುವಿನ ಭೂಮಿ ಮಾರಾಟದ ಬಗ್ಗೆಯೂ ಅಸ್ಸಾಂ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದ ಸಿಎಂ, ಅಂತಹ ವಹಿವಾಟನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೂ, ವಹಿವಾಟಿಗೂ ಮೊದಲು ಮುಖ್ಯಮಂತ್ರಿಗಳ ಒಪ್ಪಿಗೆಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.

Ad
Ad
Nk Channel Final 21 09 2023