Bengaluru 24°C
Ad

ಗೆದ್ದು ಇತಿಹಾಸ ನಿರ್ಮಿಸಿ 25ರ ಕುವರಿ : ಎನ್​ಡಿಎ ಅಭ್ಯರ್ಥಿ ಶಾಂಭವಿ ಚೌಧರಿಗೆ ಗೆಲುವು

ಉತ್ತರ ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಶಾಂಭವಿ ಚೌಧರಿ ಗೆಲುವು ಸಾಧಿಸಿದ್ದಾರೆ. 25 ವರ್ಷದ ಶಾಂಭವಿ ಈ ಮೂಲಕ ದೇಶದ ಅತ್ಯಂತ ಕಿರಿಯ ಸಂಸದರಾಗಿ ಹೊರಹೊಮ್ಮಿದ್ದು, ಇತಿಹಾಸ ಸೃಷ್ಟಿಸಿದ್ದಾರೆ.

ಪಟ್ನಾ: ಉತ್ತರ ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಶಾಂಭವಿ ಚೌಧರಿ ಗೆಲುವು ಸಾಧಿಸಿದ್ದಾರೆ. 25 ವರ್ಷದ ಶಾಂಭವಿ ಈ ಮೂಲಕ ದೇಶದ ಅತ್ಯಂತ ಕಿರಿಯ ಸಂಸದರಾಗಿ ಹೊರಹೊಮ್ಮಿದ್ದು, ಇತಿಹಾಸ ಸೃಷ್ಟಿಸಿದ್ದಾರೆ.

ಸರ್ಕಾರದ ಹಿರಿಯ ಜೆಡಿಯು ಸಚಿವ ಅಶೋಕ್ ಕುಮಾರ್ ಚೌಧರಿ ಅವರ ಪುತ್ರಿ ಶಾಂಭವಿ ಚೌಧರಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಮೀಸಲು ಕ್ಷೇತ್ರದಿಂದ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಸನ್ನಿ ಹಜಾರಿ ವಿರುದ್ಧ ಸುಮಾರು ಒಂದು ಲಕ್ಷ ಮತಗಳ ಅಂತರದಿಂಧ ಗೆಲುವು ಸಾಧಿಸಿದ್ದಾರೆ.

Ad
Ad
Nk Channel Final 21 09 2023
Ad