Bengaluru 26°C
Ad

ತಪ್ಪಿದ ಅಪಘಾತ : ಒಂದೇ ರನ್‌ವೇನಲ್ಲಿ ಎರಡೂ ವಿಮಾನಗಳ ಭಯಾನಕ ಹಾರಾಟ!

ಭಾರೀ ಅವಘಡವೊಂದು ಕ್ಷಣಮಾತ್ರದಲ್ಲಿ ತಪ್ಪಿದ ಆಘಾತಕಾರಿ ಘಟನೆ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BOM) ಶನಿವಾರ ಮುಂಜಾನೆ ಸಂಭವಿಸಿದೆ.

ಮುಂಬೈ:   ಭಾರೀ ಅವಘಡವೊಂದು ಕ್ಷಣಮಾತ್ರದಲ್ಲಿ ತಪ್ಪಿದ ಆಘಾತಕಾರಿ ಘಟನೆ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BOM) ಶನಿವಾರ ಮುಂಜಾನೆ ಸಂಭವಿಸಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಮತ್ತು ಲ್ಯಾಂಡಿಂಗ್‌ ವೇಳೆ ಎರಡು ವಿಮಾನಗಳು ಏಕಕಾಲಕ್ಕೆ ಒಂದೇ ರನ್‌ವೇನಲ್ಲಿ ಚಲಿಸಿದ ಕಾರಣ ಈ ಆಘಾತಕ್ಕೆ ಕಾರಣವಾಗಿದ್ದು, ಏರ್ ಇಂಡಿಯಾ ಫ್ಲೈಟ್ 657 ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (TRV) ಟೇಕ್ ಆಫ್ ಪ್ರಕ್ರಿಯೆಯಲ್ಲಿದ್ದ ವೇಳೆಯೇ, ದೇವಿ ಅಹಲ್ಯಾಬಾಯಿ ಹೋಲ್ಕರ್ ವಿಮಾನ ನಿಲ್ದಾಣದಿಂದ (IDR) ಒಳಬರುವ ಇಂಡಿಗೋ ಫ್ಲೈಟ್ 5053 ರನ್‌ವೇ 27 ರಲ್ಲಿಯೇ ಇಳಿದಿದೆ.

ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ.

Ad
Ad
Nk Channel Final 21 09 2023
Ad