Bengaluru 26°C
Ad

“ಶುಕ್ರಯಾನಕ್ಕೆ” ಮುಹೂರ್ತ ನಿಗದಿ ; 2028ರ ಮಾ. 29ಕ್ಕೆ ನೌಕೆ ಉಡಾವಣೆ

ಚಂದ್ರ, ಮಂಗಳ ಮತ್ತು ಸೂರ್ಯರ ಅಧ್ಯಯನದ ಬಳಿಕ ಭೂಮಿಯ ಅವಳಿ ಗ್ರಹ ಎಂದೇ ಖ್ಯಾತವಾದ ಶುಕ್ರನ ಅಧ್ಯಯನಕ್ಕೆ ಭಾರತ ಮುಂದಾಗಿದೆ. ಇದಕ್ಕಾಗಿ ಆರ್ಬಿಟರ್‌ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದ್ದು, 2028ರ ಮಾ. 29ರಂದು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಮಂಗಳವಾರ ಘೋಷಿಸಿದೆ.

ಹೊಸದಿಲ್ಲಿ: ಚಂದ್ರ, ಮಂಗಳ ಮತ್ತು ಸೂರ್ಯರ ಅಧ್ಯಯನದ ಬಳಿಕ ಭೂಮಿಯ ಅವಳಿ ಗ್ರಹ ಎಂದೇ ಖ್ಯಾತವಾದ ಶುಕ್ರನ ಅಧ್ಯಯನಕ್ಕೆ ಭಾರತ ಮುಂದಾಗಿದೆ. ಇದಕ್ಕಾಗಿ ಆರ್ಬಿಟರ್‌ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದ್ದು, 2028ರ ಮಾ. 29ರಂದು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಮಂಗಳವಾರ ಘೋಷಿಸಿದೆ.

ಈ ಯೋಜನೆಗೆ “ಶುಕ್ರಯಾನ-1′ ಎಂದು ಹೆಸರಿಡಲಾಗಿದೆ. ಶುಕ್ರ ಗ್ರಹದ ವಾತಾವರಣ, ಮೇಲ್ಪದರ, ಭೌಗೋಳಿಕ ರಚನೆ, ಸೂರ್ಯನೊಂದಿಗೆ ಶುಕ್ರ ಹೊಂದಿ ರುವ ಸಂಬಂಧವನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ.

ಉಡಾವಣೆ ಹೇಗೆ?: ಇಸ್ರೋದ ಶಕ್ತಿಶಾಲಿ ರಾಕೆಟ್‌ ಎಂದು ಕರೆಸಿಕೊಳ್ಳುವ ಎಲ್‌ಎಂವಿ ಮಾರ್ಕ್‌-3 ಮೂಲಕ ಉಡಾವಣೆ ಮಾಡ ಲಾಗುತ್ತದೆ. ನಿಗದಿತ ಕಕ್ಷೆಗೆ ನೌಕೆಯನ್ನು ಮಾರ್ಕ್‌-3 ತಲುಪಿಸ ಲಿದೆ. ಬಳಿಕ ಭೂಮಿಯನ್ನು ಸುತ್ತುತ್ತ ನೂಕುಬಲವನ್ನು ಪಡೆಯುವ ನೌಕೆಯು ಅನಂತರ ಶುಕ್ರನತ್ತ ಯಾನವನ್ನು ಮುಂದುವರಿಸಲಿದೆ. ಅದು 2028ರ ಜು. 19ರಂದು ಕಕ್ಷೆಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

 

 

Ad
Ad
Nk Channel Final 21 09 2023