Ad

ಸದನದಲ್ಲೇ ಕುಸಿದು ಬಿದ್ದ ಕಾಂಗ್ರೆಸ್​​​ ಸಂಸದೆ ಫುಲೋ ದೇವಿ

Mp Phulo Devi

ನವದೆಹಲಿ: ಕಾಂಗ್ರೆಸ್ ಸಂಸದೆ ಫುಲೋ ದೇವಿ ನೇತಮ್ ಅವರು ಇಂದು (ಶುಕ್ರವಾರ) ಸಂಸತ್ತಿನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಮೂರ್ಛೆ ಹೋಗಿದ್ದಾರೆ. ಮೂರ್ಛೆ ಹೋಗಿ ಬಿದ್ದಿದ್ದಾರೆ.  ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

Ad
300x250 2

ವೈದ್ಯಕೀಯ ಪ್ರವೇಶ ಪರೀಕ್ಷೆ NEET ಅಕ್ರಮ ಕುರಿತ ಚರ್ಚೆಗೆ ಪ್ರತಿಪಕ್ಷಗಳ ಬಿಗಿಪಟ್ಟು ಹಿಡಿದ್ದರಿಂದ ಗದ್ದಲ ಉಂಟಾಗಿತ್ತು.  ಲೋಕಸಭೆಯಲ್ಲಿ ಪ್ರತಿಪಕ್ಷಗಳು ನೀಟ್ ವಿಷಯದ ಬಗ್ಗೆ ಅವರು ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಕಾಂಗ್ರೆಸ್​​​ ಸಂಸದೆ ಫುಲೋ ದೇವಿ ಅವರಿಗೆ ತಲೆತಿರುಗಲು ಪ್ರಾರಂಭಿಸಿತು. ಬಳಿಕ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು   ದೆಹಲಿಯ ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad
Ad
Nk Channel Final 21 09 2023
Ad