Bengaluru 29°C
Ad

ಬಾಂಗ್ಲಾ ಸಂಸದನ ಹತ್ಯೆ: ಸೆಫ್ಟಿಕ್ ಟ್ಯಾಂಕ್‌ನಲ್ಲಿ 3.5 ಕೆ.ಜಿ ಮಾಂಸ ಪತ್ತೆ

Bangla Mp

ಕೋಲ್ಕತ್ತ: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್‌ ಅವರ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು ಕೊಲೆ ನಡೆದ ಫ್ಲಾಟ್‌ನ ಸೆಫ್ಟಿಕ್ ಟ್ಯಾಂಕ್‌ನಿಂದ ಸುಮಾರು 3.5 ಕೆ.ಜಿಯಷ್ಟು ಮಾಂಸದ ತುಂಡುಗಳು ಹಾಗೂ ಕೂದಲುಗಳನ್ನು ವಶಕ್ಕೆ ಪಡೆದಿದ್ದಾರೆ.

ಅನಾರ್‌ ಅವರನ್ನು ಕೊಲೆ ಮಾಡಿ ಅವರ ದೇಹವನ್ನು ಸುಮಾರು 80 ತುಣುಕುಗಳಾಗಿ ಕತ್ತರಿಸಿ ಅದಕ್ಕೆ ಅರಿಷಿಣ ಪುಡಿಯನ್ನು ಮಿಶ್ರಣ ಮಾಡಲಾಗಿದೆ. ನಂತರ ಅವುಗಳನ್ನು ಫ್ಲಾಟ್‌ನ ಸೆಪ್ಟಿಕ್ ಟ್ಯಾಂಕ್ ಸೇರಿದಂತೆ ಸನಿಹದ ಕಾಲುವೆಗೆ ಎಸೆಯಲಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.

ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್‌ ಅವರು ಚಿಕಿತ್ಸೆಗೆಂದು ಕೋಲ್ಕತ್ತಕ್ಕೆ ಬಂದು ಮೇ 18ರಂದು ಕಾಣೆಯಾಗಿದ್ದರು. ಅವರ ಮೃತದೇಹ ಮೇ 22ರಂದು ಕೋಲ್ಕತ್ತದ ನ್ಯೂಟೌನ್ ಅಪಾರ್ಟ್‌ಮೆಂಟ್ ಫ್ಲಾಟ್‌ ಒಂದರಲ್ಲಿ ಪತ್ತೆಯಾಗಿತ್ತು. ಅಂದೇ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಾಂಗ್ಲಾ ಪೊಲೀಸರು ಬಂಧಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

Ad
Ad
Nk Channel Final 21 09 2023
Ad