ನವದೆಹಲಿ : ರೈತನೋರ್ವನ ಪಿತ್ತಕೋಶದಿಂದ ಸುಮಾರು 6,110 ಕಲ್ಲುಗಳನ್ನು ಸೂಕ್ಷ್ಮ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಹೊರತೆಗೆದ ಅಚ್ಚರಿ ಪ್ರಕರಣ ಬೆಳಕಿಗೆ ಬಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕ ದಿನೇಶ್ ಜಿಂದಾಲ್ ನೀಡಿರುವ ಮಾಹಿತಿ ಪ್ರಕಾರ, ರೈತ ದೀರ್ಘಕಾಲದಿಂದ ಹೊಟ್ಟೆ ನೋವು, ವಾಂತಿ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ. ಕಳೆದವಾರ ಆಸ್ಪತ್ರೆಗೆ ದಾಖಲಾದಾಗ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಪಿತ್ತಕೋಶದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿದೆ.
ವೈದ್ಯರು 30 ನಿಮಿಷಗಳವರೆಗೆ ಶಸ್ತ್ರಚಿಕಿತ್ಸೆ ನಡೆಸಿ ಎಲ್ಲಾ ಕಲ್ಲುಗಳನ್ನು ಹೊರಗೆ ತೆಗೆದಿದ್ದಾರೆ. ಆದರೆ ಆ ಕಲ್ಲುಗಳನ್ನು ಎಣಿಸಲು ಸುಮಾರು 2 ವರೆ ಗಂಟೆ ಸಮಯ ತೆಗೆದುಕೊಂಡಿತು ಎಂದು ಹೇಳಿದ್ದಾರೆ. ಇನ್ನು ಪಿತ್ತಕೋಶದ ಗಾತ್ರ 7×2 ಸೆಂ.ಮೀನಿಂದ 12×4 ಸೆಂ.ಮೀಗೆ ದ್ವಿಗುಣಗೊಂಡಿರುವುದು ಬೆಳಕಿಗೆ ಬಂದಿದೆ.
Ad