Bengaluru 30°C
Ad

ನಿಜವಾದ ಸೇವಕನಿಗೆ ಅಹಂಕಾರ ಇರುವುದಿಲ್ಲ : ಮೋಹನ್ ಭಾಗವತ್‌

ಲೋಕಸಭಾ ಚುನಾವಣೆಯ ಬಳಿಕ ಮೊದಲ ಬಾರಿಗೆ ಹೇಳಿಕೆ ನೀಡಿರುವ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ‘ದಾರ್ಷ್ಟ್ಯದಿಂದ ಕೆಲಸ ಮಾಡುವವನು ನಿಜವಾದ ಸೇವಕ ಆಗಲು ಸಾಧ್ಯವಿಲ್ಲ’ ಎಂದಿದ್ದಾರೆ. ಆರ್ ಎಸ್ಎಸ್ ಮುಖ್ಯಸ್ಥರ ಈ ಹೇಳಿಕೆ ಮಹತ್ವ ಪಡೆದಿದೆ.

ನವದೆಹಲಿ: ಲೋಕಸಭಾ ಚುನಾವಣೆಯ ಬಳಿಕ ಮೊದಲ ಬಾರಿಗೆ ಹೇಳಿಕೆ ನೀಡಿರುವ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ‘ದಾರ್ಷ್ಟ್ಯದಿಂದ ಕೆಲಸ ಮಾಡುವವನು ನಿಜವಾದ ಸೇವಕ ಆಗಲು ಸಾಧ್ಯವಿಲ್ಲ’ ಎಂದಿದ್ದಾರೆ. ಆರ್ ಎಸ್ಎಸ್ ಮುಖ್ಯಸ್ಥರ ಈ ಹೇಳಿಕೆ ಮಹತ್ವ ಪಡೆದಿದೆ.

ನಾಗಪುರದಲ್ಲಿ ಮಾತಾನಾಡಿದ ಅವರು, ನಿಜವಾದ ‘ಸೇವಕ’ ಘನತೆಯನ್ನು ಕಾಯ್ದುಕೊಳ್ಳುತ್ತಾನೆ. ಅವನು ಕೆಲಸ ಮಾಡುವಾಗ ಸಭ್ಯತೆಯನ್ನು ಅನುಸರಿಸುತ್ತಾನೆ. ‘ನಾನು ಈ ಕೆಲಸ ಮಾಡಿದ್ದೇನೆ’ ಎಂದು ಹೇಳುವ ಅಹಂಕಾರವನ್ನು ಹೊಂದಿಲ್ಲ. ಆ ವ್ಯಕ್ತಿಯನ್ನು ಮಾತ್ರ ನಿಜವಾದ ‘ಸೇವಕ’ ಎಂದು ಕರೆಯಬಹುದು ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಬಹುಮತ ಪಡೆಯಲು ವಿಫಲವಾದ ಬಳಿಕ ಭಾಗವತ್ ಅವರುನ ಈ ಹೇಳಿಕೆ ನೀಡಿದ್ದಾರೆ.

Ad
Ad
Nk Channel Final 21 09 2023
Ad