Bengaluru 27°C
Ad

ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 45 ತಾಸಿನ ಧ್ಯಾನ ಸಂಪನ್ನ

ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆಗಲಿದ್ದಾರೆ ಎಂದು ವರದಿಯಾಗಿದೆ. ಟಿ20 ವಿಶ್ವಕಪ್ ಮುಕ್ತಾಯದೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಮುಗಿಯಲಿದ್ದು, ಇದಾದ ಬಳಿಕ ಗಂಭೀರ್ ಅಧಿಕಾರ ಸ್ವೀಕರಿಸುವುದು ಖಚಿತ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಕನ್ಯಾಕುಮಾರಿ : ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದ ಬಳಿಕ ಕನ್ಯಾಕುಮಾರಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ವಿವೇಕಾನಂದ ಸ್ಮಾರಕದಲ್ಲಿ ಗುರುವಾರ ಸಂಜೆ ಆರಂಭಿಸಿರುವ 45 ತಾಸುಗಳ ಧ್ಯಾನವನ್ನು ಪೂರ್ಣಗೊಳಿಸಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಲೋಕಸಭೆಗೆ ಏಳನೇ ಹಂತದ ಮತದಾನ ಇಂದು ನಡೆಯುತ್ತಿರುವಂತೆಯೇ ಎರಡು ದಿನಗಳ ಕಾಲ ಪ್ರಧಾನಿ ಧ್ಯಾನದಲ್ಲಿ ಮಗ್ನರಾಗಿರುವುದನ್ನು ಮತದಾರರನ್ನು ಸೆಳೆಯುವ ಪ್ರಚಾರ ತಂತ್ರವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಆದರೆ ಆರೋಪವನ್ನು ಆಡಳಿತಾರೂಢ ಬಿಜೆಪಿ ನಿರಾಕರಿಸಿತ್ತು.

 

Ad
Ad
Nk Channel Final 21 09 2023
Ad