ದೆಹಲಿ: ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಅನರ್ಹರಾಗಿದ್ದಾರೆ. 100 ಗ್ರಾಂ ಹೆಚ್ಚಿನ ತೂಕ ಹೊಂದಿದ್ದ ಕಾರಣ ಅವರನ್ನು ಅನರ್ಹಗೊಳಿಸಲಾಗಿದೆ. ಈ ವಿಚಾರ ತಿಳಿದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಬರೆಯುವ ಮೂಲಕ ವಿನೇರ್ಶ್ ಫೋಗಾಟ್ಗೆ ಧೈರ್ಯ ತುಂಬಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ‘ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನೋವು ತಂದಿದೆ. ನಾನು ಹೇಳುವ ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು’ ಎಂದು ಬಯಸುತ್ತೇನೆ
‘ಇದೇ ಸಮಯದಲ್ಲಿ, ನೀವು ಸ್ಥಿತಿಸ್ಥಾಪಕತ್ವವನ್ನು ಸಾರುತ್ತೀರಿ ಎಂದು ನನಗೆ ತಿಳಿದಿದೆ. ಸವಾಲುಗಳನ್ನು ಎದುರಿಸುವುದು ನಿಮ್ಮ ಸ್ವಭಾವವಾಗಿದೆ. ಧೈರ್ಯವಾಗಿ ಹಿಂತಿರುಗಿ ಬನ್ನಿ! ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ’ ಎಂದು ಬರೆದುಕೊಂಡಿದ್ದಾರೆ.
https://x.com/narendramodi/status/1821083814363591059
ವಿನೇಶ್ ಫೋಗಾಟ್ 50 ಕೆ.ಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ನಿನ್ನೆ ನಡೆದ ಸತತ ಮೂರು ಪಂದ್ಯಗಳಲ್ಲಿ ಎದುರಾಳಿಗಳನ್ನು ಎದುರಿಸಿ ಫೈನಲ್ಗೆ ಲಗ್ಗೆ ಇಟ್ಟರು. ಇಂದು ಫೈನಲ್ ಪಂದ್ಯ ನಡೆಯಲಿದ್ದು, ಆದರೆ ಅದಕ್ಕೂ ಮುನ್ನ 100 ಗ್ರಾಂ ತೂಕ ಹೆಚ್ಚು ಇರುವ ಕಾರಣ ಪಂದ್ಯದಿಂದ ಅನರ್ಹರಾಗಿದ್ದಾರೆ.