Bengaluru 28°C
Ad

‘ಸುಭದ್ರಾ’ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ಇಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ. ಈ ದಿನದಂದು ಅವರು ಒಡಿಶಾ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸುಭದ್ರಾ ಯೋಜನೆಗೆ ಚಾಲನೆ ನೀಡಿದರು. ಒಂದು ಕೋಟಿಗಿಂತಲೂ ಅಧಿಕ ಮಹಿಳೆಯರು ಈ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಇದು ಒಡಿಶಾ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಪ್ರತಿ ವರ್ಷ 21 ರಿಂದ 60 ವರ್ಷ ವಯಸ್ಸಿನ ಅರ್ಹ ಮಹಿಳಾ ಫಲಾನುಭವಿಗಳ ರಾಜ್ಯ ಖಾತೆಗೆ 10,000 ರೂ. ಕೊಡಲಾಗುತ್ತದೆ

ಒಡಿಶಾ: ಇಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ. ಈ ದಿನದಂದು ಅವರು ಒಡಿಶಾ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸುಭದ್ರಾ ಯೋಜನೆಗೆ ಚಾಲನೆ ನೀಡಿದರು. ಒಂದು ಕೋಟಿಗಿಂತಲೂ ಅಧಿಕ ಮಹಿಳೆಯರು ಈ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಇದು ಒಡಿಶಾ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಪ್ರತಿ ವರ್ಷ 21 ರಿಂದ 60 ವರ್ಷ ವಯಸ್ಸಿನ ಅರ್ಹ ಮಹಿಳಾ ಫಲಾನುಭವಿಗಳ ರಾಜ್ಯ ಖಾತೆಗೆ 10,000 ರೂ. ಕೊಡಲಾಗುತ್ತದೆ

ರಾಜ್ಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ರಾಜ್ಯ ಸರ್ಕಾರವು ಮಹಿಳೆಯರಿಗೆ ಎರಡು ಕಂತುಗಳಲ್ಲಿ ವರ್ಷಕ್ಕೆ ಒಟ್ಟು ಹತ್ತು ಸಾವಿರ ರೂ. ನೀಡುತ್ತದೆ.

ಸುಭದ್ರಾ ಯೋಜನೆಯ ಲಾಭ ಯಾರಿಗೆ ಸಿಗುತ್ತದೆ ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರು ಮಾತ್ರ ಸುಭದ್ರಾ ಯೋಜನೆಯ ಲಾಭ ಪಡೆಯುತ್ತಾರೆ. ಸರ್ಕಾರಿ ಉದ್ಯೋಗ ಮಾಡುವ ಮತ್ತು ಆದಾಯ ತೆರಿಗೆ ಪಾವತಿಸುವ ಮಹಿಳೆಯರು ಈ ಯೋಜನೆಗೆ ಒಳಪಡುವುದಿಲ್ಲ. ಮಹಿಳೆಯು ಯಾವುದೇ ಇತರ ಸರ್ಕಾರಿ ಯೋಜನೆಗಳಿಂದ ಪ್ರತಿ ವರ್ಷ ರೂ 15,000 ಅಥವಾ ಅದಕ್ಕಿಂತ ಹೆಚ್ಚಿನ ಲಾಭವನ್ನು ಪಡೆದರೆ, ಆಕೆಯನ್ನು ಈ ಯೋಜನೆಗೆ ಅನ್ವಯವಾಗುವುದಿಲ್ಲ.

Ad
Ad
Nk Channel Final 21 09 2023