Bengaluru 22°C
Ad

ಇಂದು ದೇಶಕ್ಕೆ ಮೂರು ಪರಮ್ ರುದ್ರ ಸೂಪರ್‌ ಕಂಪ್ಯೂಟರ್‌ ಅರ್ಪಿಸಿದ ಮೋದಿ

ಮೋದಿ ಇಂದು ಗುರುವಾರ ಮೂರು ಪರಮ್ ರುದ್ರ ಸೂಪರ್‌ ಕಂಪ್ಯೂಟರ್‌ಗಳು ಮತ್ತು ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಸಿಸ್ಟಮ್‌ಗಳನ್ನು ದೇಶಕ್ಕೆ ಸಮರ್ಪಿಸಿದ್ದಾರೆ.

ನವದೆಹಲಿ : ಮೋದಿ ಇಂದು ಗುರುವಾರ ಮೂರು ಪರಮ್ ರುದ್ರ ಸೂಪರ್‌ ಕಂಪ್ಯೂಟರ್‌ಗಳು ಮತ್ತು ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಸಿಸ್ಟಮ್‌ಗಳನ್ನು ದೇಶಕ್ಕೆ ಸಮರ್ಪಿಸಿದ್ದಾರೆ.

ದೆಹಲಿ, ಪುಣೆ ಮತ್ತು ಕೋಲ್ಕತ್ತಾದಲ್ಲಿ ಇವುಗಳನ್ನು ಸ್ಥಾಪಿಸಲಾಗಿದ್ದು, ಇದ್ರಿಂದ ಭಾರತದ ವಿಜ್ಞಾನಿಗಳು ಅತ್ಯಾಧುನಿಕ ಸೌಲಭ್ಯಗಳ ಪ್ರಯೋಜನ ಪಡೆಯಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಮೂರು ಸೂಪರ್‌ಕಂಪ್ಯೂಟರ್‌ಗಳು ಭೌತಶಾಸ್ತ್ರ, ಭೂ ವಿಜ್ಞಾನ ಮತ್ತು ವಿಶ್ವವಿಜ್ಞಾನದಿಂದ ಮುಂದುವರಿದ ಸಂಶೋಧನೆಗೆ ಸಹಾಯ ಮಾಡಲಿದ್ದು, ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಷನ್ ಅನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜಂಟಿಯಾಗಿ ನಿರ್ವಹಿಸುತ್ತದೆ ಎಂದು ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್, ಪುಣೆ, ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ  ಇದನ್ನು ಅನುಷ್ಠಾನ ಮಾಡಲಿವೆ ಎಂದರು.

 

Ad
Ad
Nk Channel Final 21 09 2023