Ad

ನೇಣು ಬಿಗಿದುಕೊಂಡು ಕಾಂಗ್ರೆಸ್‌ ಶಾಸಕನ ಪತ್ನಿ ಆತ್ಮಹತ್ಯೆ!

Mla Medipally Sathyam Wife Rupa Devi

ಹೈದರಾಬಾದ್‌: ತೆಲಂಗಾಣದ ಕರೀಂನಗರ ಜಿಲ್ಲೆಯ ಚೊಪ್ಪದಂಡಿ ಕಾಂಗ್ರೆಸ್​​ ಶಾಸಕ ಮೇಡಿಪಲ್ಲಿ ಸತ್ಯಂ ಅವರ ಪತ್ನಿ ರೂಪಾದೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Ad
300x250 2

ಅಲ್ವಾಲ್ ಪಂಚಶೀಲಾ ಕಾಲೋನಿಯ ಮನೆಯೊಂದರಲ್ಲಿ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12 ವರ್ಷಗಳ ಹಿಂದೆ ಮೇಡಿಪಲ್ಲಿ ಸತ್ಯಂ ರೂಪಾದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಪತ್ನಿ ರೂಪಾದೇವಿ ಜೊತೆ ವೈಮನಸ್ಯ ಇರುವ ಶಂಕೆ ವ್ಯಕ್ತವಾಗಿದೆ. ರೂಪಾದೇವಿ ಮೇಡ್ಚಲ್ ಮುನಿರಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ರೂಪಾದೇವಿ ವೀಡಿಯೋ ಕಾಲ್ ಮಾಡಿ ಶಾಸಕ ಸತ್ಯಂಗೆ ತಾನು ಸಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕೂಡಲೇ ಸತ್ಯಂ ಚೊಪ್ಪದಂಡಿಯಿಂದ ಕಾರಿನಲ್ಲಿ ಹೈದರಾಬಾದ್ ಗೆ ಹೊರಟುಬಂದಿದ್ದಾರೆ. ಆದರೆ ಅಲ್ವಾಲ್ ತಲುಪಿದಾಗ ರೂಪಾದೇವಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವು ಕಂಡುಬಂದಿದೆ. ಕೂಡಲೇ ಆಕೆಯನ್ನು ಮನೆ ಸಮೀಪದ ಆಸ್ಪತ್ರೆಗೆ ಸಾಗಿಸಿದಾಗ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಪತ್ನಿಯ ಸಾವನ್ನು ಸಹಿಸಲಾಗದೆ ಶಾಸಕ ಸತ್ಯಂ ಆಸ್ಪತ್ರೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇನ್ನು ಮೇಡ್ಚಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

Ad
Ad
Nk Channel Final 21 09 2023
Ad