Bengaluru 25°C
Ad

ರಾಜ್ಯದ ಈ ಐವರಿಗೆ ಕಾದಿದೆ ಬಂಪರ್‌ ಆಫರ್‌ : ಸಚಿವ ಪಟ್ಟ ಖಚಿತ

ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದು ರಾತ್ರಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯದ ಐವರಿಗೆ ಸಚಿವ ಸ್ಥಾನ ಖಾತ್ರಿಯಾಗಿದೆ.

ನವದೆಹಲಿ : ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದು ರಾತ್ರಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯದ ಐವರಿಗೆ ಸಚಿವ ಸ್ಥಾನ ಖಾತ್ರಿಯಾಗಿದೆ.

ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ನಿರ್ಮಲಾ ಸೀತರಾಮನ್‌, ಧಾರವಾಡ ಸಂಸದ ಪಲ್ಹಾದ ಜೋಶಿ, ತುಮಕೂರು ಸಂಸದ ವಿ.ಸೋಮಣ್ಣ, ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಿತ್ರ ಪಕ್ಷವಾಗಿರುವ ಜೆಡಿಎಸ್‌ ನಾಯಕ ಎಚ್‌. ಡಿ. ಕುಮಾರಸ್ವಾಮಿ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ನಿರ್ಮಲಾ ಹಾಗೂ ಜೋಶಿ ಬ್ರಾಹ್ಮಣ, ಕುಮಾರಸ್ವಾಮಿ ಹಾಗೂ ಕರಂದ್ಲಾಜೆ ಒಕ್ಕಲಿಗೆ ಮತ್ತು ಸೋಮಣ್ಣ ಲಿಂಗಾಯುತ ಸಮುದಾಯದವರು. ರಾಷ್ಟ್ರಪತಿ ಭವನದಲ್ಲಿ ಇಂದು ರಾತ್ರಿ ನಡೆಯಲಿರುವ ಸಮಾರಂಭದಲ್ಲಿ ಮೋದಿ ಅವರು(ರಾತ್ರಿ 7.15) ಪ್ರಮಾಣ ಸ್ವೀಕರಿಸಿಲಿದ್ದಾರೆ.

Ad
Ad
Nk Channel Final 21 09 2023
Ad