Bengaluru 20°C
Ad

ವಿದೇಶಗಳಿಗೆ ರಫ್ತಾಗಲಿರುವ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರುಗಳು

ಮಾರುತಿ ಸುಜುಕಿ ಸಂಸ್ಥೆ ಭಾರತದಲ್ಲಿರುವ ತನ್ನ ಘಟಕಗಳಲ್ಲಿ ತಯಾರಿಸಲಾಗುವ ಎಲೆಕ್ಟ್ರಿಕ್ ಕಾರುಗಳನ್ನು ಯೂರೋಪ್ ಮತ್ತು ಜಪಾನ್ ಮಾರುಕಟ್ಟೆಗಳಿಗೆ ರಫ್ತು ಮಾಡಲು ಯೋಜಿಸಿದೆ.

ನವದೆಹಲಿ: ಮಾರುತಿ ಸುಜುಕಿ ಸಂಸ್ಥೆ ಭಾರತದಲ್ಲಿರುವ ತನ್ನ ಘಟಕಗಳಲ್ಲಿ ತಯಾರಿಸಲಾಗುವ ಎಲೆಕ್ಟ್ರಿಕ್ ಕಾರುಗಳನ್ನು ಯೂರೋಪ್ ಮತ್ತು ಜಪಾನ್ ಮಾರುಕಟ್ಟೆಗಳಿಗೆ ರಫ್ತು ಮಾಡಲು ಯೋಜಿಸಿದೆ.

ಈ ವಿಷಯವನ್ನು ಮಾರುತಿ ಸುಜುಕಿ ಎಂಡಿ ಮತ್ತು ಸಿಇಒ ಹಿಸಾಶಿ ಟಕೆಯುಚಿ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎಸ್​ಐಎಎಂ ಸಂಘಟನೆಯ 64ನೇ ವಾರ್ಷಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಮಾರುತಿ ಸುಜುಕಿ ಮುಖ್ಯಸ್ಥರು, ವಿದೇಶಗಳಿಗೆ ರಫ್ತಾಗಲಿರುವ ತಮ್ಮ ಕಂಪನಿಯ ಇವಿಗಳು ಉನ್ನತ ಶ್ರೇಣಿದ್ದಿರುತ್ತವೆ ಎಂದಿದ್ದಾರೆ.

ಅವರ ಪ್ರಕಾರ, ಯೂರೋಪ್ ಮತ್ತು ಜಪಾನ್​ಗೆ ರಫ್ತಾಗಲಿರುವ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರುಗಳು 60 ಕಿ. ವ್ಯಾ. ಬ್ಯಾಟರಿ ಹೊಂದಿರುತ್ತವೆ. 500 ಕಿಮೀವರೆಗೆ ಸಾಗಬಲ್ಲುವು. ಇಂಥ ಹಲವು ಕಾರುಗಳನ್ನು ತಾವು ತಯಾರಿಸಲಿದ್ದು ಗ್ರಾಹಕರ ವಿಶ್ವಾಸ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಮಾರುತಿ ಸುಜುಕಿ ಇಂಡಿಯಾ ಸಂಸ್ಥೆ ತನ್ನ ಕೆಲ ಮಾಡಲ್ ಕಾರುಗಳನ್ನು ರಫ್ತು ಮಾಡುತ್ತಾ ಬಂದಿದೆ. ವರ್ಷದಿಂದ ವರ್ಷಕ್ಕೆ ಅದರ ರಫ್ತು ಪ್ರಮಾಣ ಹೆಚ್ಚುತ್ತಿದೆ.

ನಾಲ್ಕು ವರ್ಷದಲ್ಲಿ ನಮ್ಮ ರಫ್ತು ಈಗ ಮೂರು ಪಟ್ಟು ಹೆಚ್ಚಾಗಿದೆ. ಇನ್ನಾರು ವರ್ಷದಲ್ಲಿ ರಫ್ತು ಇನ್ನೂ ಮೂರು ಪಟ್ಟು ಹೆಚ್ಚಾಗಲಿದೆ ಎಂದು ಮಾರುತಿ ಸುಜುಕಿ ಸಿಇಒ ಹಿಸಾಶಿ ಟಕೆಯುಚಿ ಇಂದು ಮಂಗಳವಾರ ಹೇಳಿದ್ದಾರೆ. ಮಾರುತಿ ಸುಜುಕಿ ಕಂಪನಿ ಕಾರ್ಬನ್ ಮಾಲಿನ್ಯ ನಿಯಂತ್ರಿಸಲು ಎಲ್ಲಾ ರೀತಿಯ ತಂತ್ರಜ್ಞಾನಗಳ ಬಳಕೆಗೆ ಆಲೋಚಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳು, ಹೈಬ್ರಿಡ್ ಕಾರುಗಳು ಮಾತ್ರವಲ್ಲ, ಜೈವಿಕ ಇಂಧನ ಮತ್ತು ಹೈಡ್ರೋಜನ್ ಇಂಧನದಿಂದ ಚಾಲಿತವಾಗಬಲ್ಲಂತಹ ಕಾರಿನ ಮಾಡಲ್​ಗಳನ್ನು ಅಭಿವೃದ್ದಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಸಿಇಒ ಮಾಹಿತಿ ನೀಡಿದ್ದಾರೆ.

ಬಹಳಷ್ಟು ದೇಶಗಳು ಬಯೋಫುಯೆಲ್​ನ ಶಕ್ತಿ ಬಳಸುತ್ತಿವೆ. ನನ್ನ ಪ್ರಕಾರ ಭಾರತ ಬಹಳ ಬೇಗನೇ ಬಯೋಫುಯಲ್​ನಲ್ಲಿ ವಿಶ್ವದ ನಂಬರ್ ಒನ್ ಸ್ಥಾನಕ್ಕೆ ಏರಬಹುದು. ಇತರೆ ದೇಶಗಳು ಭಾರತವನ್ನು ನೋಡಿ ಕಲಿಯುವಂತಾಗಬಹುದು ಎಂದು ಮಾರುತಿ ಸುಜುಕಿ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

Ad
Ad
Nk Channel Final 21 09 2023