ಪ್ರಯಾಗರಾಜ್: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಿರುವ ಹಲವು ಭಕ್ತರಿಗೆ ಹೃದಯಾಘಾತವಾಗಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ತೀವ್ರ ಚಳಿಯ ನಡುವೆಯೂ ಕೋಟ್ಯಂತರ ಭಕ್ತರು ಕುಂಭಮೇಳಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಜನಜಂಗಳಿ ಹಾಗೂ ವಿಪರೀತ ಚಳಿಯಿಂದಾಗಿ ಸಾವಿರಾರು ಜನರು ಅಸ್ವಸ್ಥರಾಗಿದ್ದಾರೆ. ಮಂಗಳವಾರ ಎನ್‌ಸಿಪಿ (ಎಸ್‌ಪಿ) ನಾಯಕ ಮಹೇಶ್ ಕೋಠೆ, ನಾಗ ಸನ್ಯಾಸಿ ಸೇರಿದಂತೆ 6 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇನ್ನು ಕೇಂದ್ರ ಆಸ್ಪತ್ರೆಯಲ್ಲಿನ ಐಸಿಯು ವಾರ್ಡ್‌ನಲ್ಲಿ ಹೃದಯ ರೋಗಗಳೇ ತುಂಬಿದ್ದಾರೆ ಎನ್ನಲಾಗಿದೆ. ನಿರಂತರವಾಗಿ ಬದಲಾಗುತ್ತಿರುವ ಹವಾಮಾನದಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಕ್ತರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.