Bengaluru 24°C
Ad

ತಿರುಪತಿ ಲಡ್ಡು ಅಶುದ್ಧಿ; ಇಂದಿನಿಂದ ತಿಮ್ಮಪ್ಪನ ಸನ್ನಿಧಿಯಲ್ಲಿ ಮಹಾಶಾಂತಿ

ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ಆರೋಪ ಇಡೀ ದೇಶದಲ್ಲೇ ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ತಿರುಮಲದ ಪಾವಿತ್ರ್ಯತೆ ಕಾಪಾಡಲು ಟಿಟಿಡಿ ಮಹಾ ಶಾಂತಿಯಾಗಕ್ಕೆ ಮುಂದಾಗಿದೆ. ಮತ್ತೊಂದೆಡೆ ಇಡೀ ದೇಗುಲ ಶುದ್ಧೀಕರಣಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೂಚನೆ ನೀಡಿದ್ದು, ತಿಮ್ಮಪ್ಪನ ಸನ್ನಿಧಾನದಲ್ಲಿ ಶುದ್ಧಿ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.

ಆಂಧ್ರಪ್ರದೇಶ :  ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ಆರೋಪ ಇಡೀ ದೇಶದಲ್ಲೇ ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ತಿರುಮಲದ ಪಾವಿತ್ರ್ಯತೆ ಕಾಪಾಡಲು ಟಿಟಿಡಿ ಮಹಾ ಶಾಂತಿಯಾಗಕ್ಕೆ ಮುಂದಾಗಿದೆ. ಮತ್ತೊಂದೆಡೆ ಇಡೀ ದೇಗುಲ ಶುದ್ಧೀಕರಣಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೂಚನೆ ನೀಡಿದ್ದು, ತಿಮ್ಮಪ್ಪನ ಸನ್ನಿಧಾನದಲ್ಲಿ ಶುದ್ಧಿ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.

ಲಡ್ಡು ವಿವಾದದ ಬೆನ್ನಲ್ಲೇ ಕಳೆದ ಮೂರು ದಿನಗಳಿಂದ ತಿರುಪತಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಆಗಿತ್ತು. ವೀಕೆಂಡ್​ ಹಾಗೂ ತಮಿಳುನಾಡಿನ ಶ್ರಾವಣ ಮಾಸ ಆರಂಭ ಹಿನ್ನೆಲೆ, ತಿರುಮಲದಲ್ಲಿ ಮತ್ತೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ತಮಿಳುನಾಡಿನ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ನ್ಯೂಸ್​ಫಸ್ಟ್​ನ ಗ್ರೌಂಡ್​ ರಿಪೋರ್ಟ್​ನಲ್ಲಿ ಗೊತ್ತಾಗಿದೆ. ತಿರುಪತಿಗೆ ಭೇಟಿ ನೀಡ್ತಿರುವ ಕೆಲ ಭಕ್ತರಲ್ಲಿ ಲಡ್ಡು ಬಗ್ಗೆ ಇನ್ನೂ ಗೊಂದಲ ದೂರ ಆಗಿಲ್ಲ, ಹೀಗಾಗಿ ವಿಶೇಷ ಪೂಜೆಗೆ ಟಿಟಿಡಿ ನಿರ್ಧರಿಸಿದೆ.

ಇಂದಿನಿಂದ ಮೂರು ದಿನಗಳ ಕಾಲ ತಿರುಮಲದಲ್ಲಿ ಮಹಾಶಾಂತಿ ಯಾಗ ನಡೆಯಲಿದೆ. ಲಡ್ಡು ಪ್ರಸಾದ ಅಪವಿತ್ರ ಆದ ಕಾರಣಕ್ಕೆ ಶುದ್ಧಿಗೊಳಿಸಲು ಮಹಾ ಶಾಂತಿ ಯಾಗ ಮಾಡಲಾಗ್ತಿದೆ ಎಂದು ಟಿಟಿಡಿ ತಿಳಿಸಿದೆ. ಈ ಯಾಗದಲ್ಲಿ ವೇದ ವಿದ್ವಾಂಸರ ಜೊತೆಗೆ ಖುತ್ವಿಕರು ಕೂಡ ಭಾಗಿಯಾಗಲಿದ್ದಾರೆ. ಈಗಾಗಲೇ ಟಿಟಿಡಿ ಎಕ್ಸಿಕ್ಯೂಟಿವ್ ಆಫೀಸರ್, ಉನ್ನತಾಧಿಕಾರಿಗಳು, ಪ್ರಧಾನ ಅರ್ಚಕರು, ವಿಧ್ವಾಂಸರ ಜೊತೆ ಗುಣಮಟ್ಟದ ಲಡ್ಡು ಪ್ರಸಾದದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Ad
Ad
Nk Channel Final 21 09 2023