Bengaluru 22°C
Ad

ಲಕ್ಷ ಲಕ್ಷ ಹಣ ಸುರಿದು ಮಗನ ತುಲಾಭಾರ ಸೇವೆ ಮಾಡಿಸಿದ ರೈತ!

ರೈತನೊಬ್ಬ ಮಗನ ತುಲಾಭಾರಕ್ಕೆ ಕಂತೆ ಕಂತೆ ಹಣ ಸುರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

ಮಧ್ಯಪ್ರದೇಶ : ರೈತನೊಬ್ಬ ಮಗನ ತುಲಾಭಾರಕ್ಕೆ ಕಂತೆ ಕಂತೆ ಹಣ ಸುರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಚತುರ್ಭುಜ ಜಾಟ್ ಎಂಬ ರೈತ, ತಮ್ಮ ಪುತ್ರನ ಒಳಿತಿಗಾಗಿ ಶ್ರೀ ಸತ್ಯವಾದಿ ವೀರ ತೇಜಾಜಿ ಮಹಾರಾಜ್ ಬಳಿ ತಮ್ಮ ಕೋರಿಕೆಯನ್ನ ಕೇಳಿಕೊಂಡಿದ್ದರು.

ತಾವು ಮೊರೆಯಿಟ್ಟ ಎಲ್ಲಾ ಕೋರಿಕೆ ಈಡೇರಿರುವುದರ ಹಿನ್ನಲೆ, ತಮ್ಮ ಪುತ್ರ ವೀರೇಂದ್ರ ಜಾಟ್ ರನ್ನ ದೇವಸ್ಥಾನಕ್ಕೆ ಕರೆತಂದು ತುಲಾಭಾರ ಮಾಡಿಸಿದ್ದಾರೆ. ತಕ್ಕಡಿಯಲ್ಲಿ ಒಂದ್ಕಡೆ ಕಂತೆ ಕಂತೆ ಹಣ, ಮತ್ತೊಂದು ಕಡೆ ಮಗನನ್ನ ಕೂರಿಸಿ ಲಕ್ಷ ಲಕ್ಷ ಹಣ ಸುರಿದು ತುಲಾಭಾರ ಮಾಡಿದ್ದಾರೆ.

ಸುಮಾರು 83 ಕೆಜಿಕೆ ತೂಕವಿರುವ  ತಮ್ಮ ಪುತ್ರನನ್ನ ದೇವಸ್ಥಾನದ ತುಲಾಭಾರದ ತಕ್ಕಡಿಯಲ್ಲಿ ಕೂರಿಸಿ, ಮತ್ತೊಂದೆಡೆ 10 ಸಾವಿರ ರೂಪಾಯಿಗಳ ಕಂತೆ ಕಂತೆ ನೋಟುಗಳನ್ನು ತಕ್ಕಡಿಯಲ್ಲಿ ಹಾಕಿ ತುಲಾಭಾರ ನೆರವೇರಿಸಿ ತಮ್ಮ ಹರಕೆ ತೀರಿಸಿದ್ದಾರೆ. ಆ ಮೂಲಕ ಸುಮಾರು 10 ಲಕ್ಷದ 7 ಸಾವಿರ ರೂಪಾಯಿ ಹಣವನ್ನ ತುಲಾಭಾರದ ಮೂಲಕ ಈ ರೈತ ದೇಣಿಗೆಯಾಗಿ ದೇವಸ್ಥಾನಕ್ಕೆ ನೀಡಿದ್ದಾರೆ.

https://x.com/souramonu567/status/1834563788475154730?

Ad
Ad
Nk Channel Final 21 09 2023