Bengaluru 27°C

ಪ್ರಯಾಗರಾಜ್‌ನಲ್ಲಿರುವ ಕುಂಭಮೇಳ ಪ್ರದೇಶವನ್ನು ವಾಹನ ರಹಿತ ವಲಯ ಎಂದು ಘೋಷಣೆ

ಸರ್ಕಾರ ಜನವರಿ 27 ರಿಂದ 30 ರವರೆಗೆ ಪ್ರಯಾಗರಾಜ್‌ನಲ್ಲಿರುವ ಮಹಾ ಕುಂಭಮೇಳ ಪ್ರದೇಶವನ್ನು ವಾಹನ ರಹಿತ ವಲಯ ಎಂದು ಘೋಷಣೆ ಮಾಡಿದೆ.

ಉತ್ತರ ಪ್ರದೇಶ : ಸರ್ಕಾರ ಜನವರಿ 27 ರಿಂದ 30 ರವರೆಗೆ ಪ್ರಯಾಗರಾಜ್‌ನಲ್ಲಿರುವ ಮಹಾ ಕುಂಭಮೇಳ ಪ್ರದೇಶವನ್ನು ವಾಹನ ರಹಿತ ವಲಯ ಎಂದು ಘೋಷಣೆ ಮಾಡಿದೆ. ಜನವರಿ 29 ರಂದು ಮೌನಿ ಅಮಾವಾಸ್ಯೆ ಪ್ರಯುಕ್ತ ಕೋಟ್ಯಂತರ ಭಕ್ತರು ಆಗಮಿಸುವ ಹಿನ್ನಲೆ ಈ ಮುನ್ನೆಚ್ಚರುಕೆ ವಹಿಸಲಾಗಿದೆ.


ಇನ್ನು ಈ ಮೌನಿ ಅಮವಾಸ್ಯೆಯಂದು ಪ್ರಯಾಗರಾಜ್ ಗೆ 150 ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಲಕ್ಷಾಂತರ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಈ ವ್ಯವಸ್ಥೆ ಕಲ್ಪಿಸಲಾಗಿದೆ.


ದೇಶದ ವಿವಿಧ ಭಾಗಗಳಿಂದ ಪ್ರಯಾಗರಾಜ್ ಗೆ ಆಗಮಿಸುವ ಕೋಟ್ಯಾಂತರ ಭಕ್ತರು ಆಗಮಿಸುತ್ತಿದ್ದು, ಜನಸಂದಣಿಯನ್ನು ನಿರ್ವಹಿಸಲು ರೈಲ್ವೇ ಇಲಾಖೆ ಪ್ರಯಾಗ್‌ರಾಜ್ ನ ಒಂಬತ್ತು ನಿಲ್ದಾಣಗಳಿಗೆ 150 ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ.


Nk Channel Final 21 09 2023