Ad

ಹರಿಯಾಣ ಕಾಂಗ್ರೆಸ್ ನಾಯಕಿ ಕಿರಣ್ ಚೌಧರಿ ಇಂದು ಬಿಜೆಪಿ ಸೇರ್ಪಡೆ

Kiran

ನವದೆಹಲಿ: ಕಾಂಗ್ರೆಸ್ ನಾಯಕಿ ಹಾಗೂ ಶಾಸಕಿ ಕಿರಣ್ ಚೌಧರಿ ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಅವರೊಂದಿಗೆ ಅವರ ಪುತ್ರಿಯಾಗಿರುವ ಮಾಜಿ ಸಂಸದೆ ಶ್ರುತಿ ಚೌಧರಿ ಕೂಡ ಬಿಜೆಪಿ ಸೇರಲಿದ್ದಾರೆ. ಇವರಿಬ್ಬರೂ ಇಂದು (ಬುಧವಾರ) ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ಬಿಜೆಪಿ ಸೇರುವ ಸಾಧ್ಯತೆ ಇದೆ. ಕಿರಣ್ ಚೌಧರಿ ಹರಿಯಾಣದ ತೋಷಮ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ.

Ad
300x250 2

ಅವರು ತಮ್ಮ ಮಗಳಿಗೆ ಭಿವಾನಿ ಮಹೇಂದ್ರಗಢ ಕ್ಷೇತ್ರದಿಂದ ಕಾಂಗ್ರೆಸ್ ಲೋಕಸಭೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ, ಕಾಂಗ್ರೆಸ್ ತಮ್ಮ ಮಗಳಿಗೆ ಟಿಕೆಟ್ ನೀಡದ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕ ರಾವ್ ದಾನ್ ಸಿಂಗ್ ಅವರನ್ನು ಮಹಿಂದರ್‌ಗಢ ಲೋಕಸಭೆಯಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ, ಚುನಾವಣೆಯಲ್ಲಿ ಅವರು ಸೋತರು. ಅದರ ನಂತರ, ರಾವ್ ದಾನ್ ಸಿಂಗ್ ಅವರು ಕಿರಣ್ ಚೌಧರಿಯ ಹೆಸರನ್ನು ಹೇಳದೆ ಟೀಕಾ ಪ್ರಹಾರ ನಡೆಸಿದ್ದರು.

ಕಿರಣ್ ಚೌಧರಿ 2 ದಿನಗಳ ಹಿಂದೆ ಭಿವಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷ ತೊರೆಯುವ ಸುಳಿವು ನೀಡಿದ್ದರು. ಕಿರಣ್ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದವರು. ಆಕೆಯ ಮಾವ ಬನ್ಸಿ ಲಾಲ್ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು. ಈಗಾಗಲೇ ಕಿರಣ್ ಚೌಧರಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಕಿರಣ್ ಚೌಧರಿ ಜೊತೆಗೆ ಅವರ ಪುತ್ರಿ ಶ್ರುತಿ ಚೌಧರಿ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

 

Ad
Ad
Nk Channel Final 21 09 2023
Ad