Bengaluru 22°C
Ad

ತನ್ನ ಅಪಹರಣ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸಿದ ವಕೀಲ

Lawyer

ಉತ್ತರ ಪ್ರದೇಶ: 17 ವರ್ಷದ ಹಿಂದೆ ಅಪಹರಣಕ್ಕೊಳಗಾದ ಬಾಲಕನೋರ್ವ ಈಗ ವಕೀಲನಾಗಿ ತನ್ನ ಪ್ರಕರಣವನ್ನು ತಾನೇ ಕೋರ್ಟ್​ನಲ್ಲಿ ವಾದಿಸಿದ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಈ ಘಟನೆಗೆ ಸಾಕ್ಷಿಯಾಗಿದೆ.

ಆಗ್ರಾದ ಹರ್ಷ್​​ ಗಾರ್ಗ್​​​ ಅವರು 17 ವರ್ಷದ ಹಿಂದೆ ಅಪಹರಣಕ್ಕೆ ಒಳಗಾಗಿದ್ದರು. 2007ರಲ್ಲಿ ಕಿಡ್ನಾಪ್​ಗೆ ಒಳಗಾಗಿದ್ದರು. ಈ ಫಟನೆಯ ಬಳಿಕ ವಕೀಲನಾಗಬೇಕೆಂದು ಬಯಸಿ ಕೊನೆಗೆ ಅದೇ ವೃತ್ತಿಯನ್ನು ಬಯಸಿದರು. ಈ ವರ್ಷ ಜೂನ್​ ತಿಂಗಳಿನಲ್ಲಿ ತನ್ನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್​ನೊಂದಿಗೆ ವಾದ ಮಂಡಿಸಿದ್ದಾರೆ ಗೆದ್ದಿದ್ದಾರೆ.

ಹರ್ಷ್​ ಗಾರ್ಗ್​ ವಾದದ ಬಳಿಕ ನ್ಯಾಯಾಲಯವು ಆರೋಪಿಗಳಾದ ಗುಡ್ಡನ್​​ ಕಚ್ಚಿ, ರಾಜೇರ್ಶ್ ಶರ್ಮಾ, ರಾಜ್​ ಕುಮಾರ್​, ಫತೇ ಸಿಂಗ್​ ಅಲಿಯಾಸ್​ಚಿಗ್ಗಾ, ಅಮರ್​ ಸಿಂಗ್​, ಬಲ್ಟೀರ್​, ರಾಮ್​ ಪ್ರಕಾಶ ಮತ್ತು ಭಿಕಮ್​ ಅಲಿಯಾಸ್​ ಭಿಕಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಹರ್ಷ್​ ಗಾರ್ಗ್​​​ ಅವರು ಫೆಬ್ರವರಿ 10, 2007ರಂದು ತಂದೆ ರವಿ ಗಾರ್ಗ್​​ ಜೊತೆಗೆ ಸ್ಥಳೀಯ ಮೆಡಿಕಲ್​​​ ಸ್ಟೋರ್​​ನಲ್ಲಿ ಕುಳಿತ್ತಿದ್ದರು. ಸಂಜೆ 7 ಗಂಟೆ ಸುಮಾರಿಗೆ ರಾಜಸ್ಥಾನ ನೋಂದಣಿಯ ವಾಹನ ಅಲ್ಲಿಗೆ ಬಂದಿತ್ತು.

ಕಾರಿನಿಂದ ಇಳಿದ ಅಪಹರಣಕಾರರು ನೇರವಾಗಿ ರವಿ ಗಾರ್ಗ್​ ಬಳಿ ಬಂದು ಗನ್​ ತೋರಿಸಿ ಮಗನನ್ನು ಕಿಡ್ನಾಪ್​ ಮಾಡಿದ್ದಾರೆ. ಈ ವೇಳೆ ತಡೆದ ರವಿ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ 55 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ಅದೇ ವರ್ಷ ಮಾರ್ಚ್​ 7 ರಂದು ಹರ್ಷ್​​ ಗಾರ್ಗ್​​ ತಪ್ಪಿಸಿಕೊಳ್ಳುವ ಮೂಲಕ ಬಚಾವ್​ ಆದರು. ಕೊನೆಗೆ ಹರ್ಷ್​ ಗಾರ್ಗ್​ನನ್ನು ಹಿಂಬಾಲಿಸುವ ವೇಳೆ ಪೊಲೀಸರು ಇರೋದು ಗೊತ್ತಾಯಿತು. ಕೊನೆಗೆ ಪರಾರಿಯಾಗಲು ಹೊರಟ ಆರೋಪಿಗಳನ್ನು ಬಂಧಿಸಿದ್ದಾರೆ.

Ad
Ad
Nk Channel Final 21 09 2023