Ad

ಅಬಕಾರಿ ಹಗರಣ ಕೇಸ್‌ : ಕೇಜ್ರಿವಾಲ್‌ಗೆ ನ್ಯಾಯಾಂಗ ಬಂಧನ ಜು. 3ರವರೆಗೆ ವಿಸ್ತರಣೆ

ಅಬಕಾರಿ  ಹಗರಣದ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ, ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್  ಅವರ ಬಂಧನವನ್ನು ಜುಲೈ 3ರವರೆಗೆ  ದೆಹಲಿ ಕೋರ್ಟ್‌ ವಿಸ್ತರಿಸಿದೆ. 

ನವದೆಹಲಿ: ಅಬಕಾರಿ  ಹಗರಣದ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ, ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್  ಅವರ ಬಂಧನವನ್ನು ಜುಲೈ 3ರವರೆಗೆ  ದೆಹಲಿ ಕೋರ್ಟ್‌ ವಿಸ್ತರಿಸಿದೆ.

Ad
300x250 2

ದಿಲ್ಲಿ ಅಬಕಾರಿ ನೀತಿ ಜಾರಿ ವೇಳೆ ಭಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮಾರ್ಚ್‌ 21ರಂದು ಜಾರಿ ನಿರ್ದೇಶನಾಲಯ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಿದೆ. ಲೋಕಸಭಾ ಚುನಾವಣೆ ವೇಳೆ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್‌ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು.

ಮೇ 10ರಂದು ಹೊರಗೆ ಬಂದ ಅವರು ಜಾಮೀನು ಅವಧಿ ಮುಗಿಯುವವರೆಗೆ ಪ್ರಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಅವಧಿ ಮುಗಿದ ಬಳಿಕ ಜೂನ್‌ 2ರಂದು ಮತ್ತೆ ಜೈಲಿಗೆ ತೆರಳಿದ್ದರು.

 

Ad
Ad
Nk Channel Final 21 09 2023
Ad