Bengaluru 21°C
Ad

ತಿರುಪತಿ ಲಡ್ಡು ವಿವಾದ; ಪವನ್ ಕಲ್ಯಾಣ್ ಬಳಿ ಕ್ಷಮೆಯಾಚಿಸಿದ ನಟ ಕಾರ್ತಿ

Karthi

ಚೆನ್ನೈ: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಆಂಧ್ರ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ಅವರಲ್ಲಿ ತಮಿಳು ನಟ ಕಾರ್ತಿ ಅವರು ಕ್ಷಮೆ ಯಾಚಿಸಿದ್ದಾರೆ. ಸಮಾರಂಭವೊಂದರಲ್ಲಿ ತಿರುಪತಿ ಲಾಡು ಬಗ್ಗೆ ಪ್ರಸ್ತಾಪ ಆದಾಗ ಕಾರ್ತಿ ಅವರು ‘ಇಲ್ಲಿ ಆ ಬಗ್ಗೆ ಪ್ರಸ್ತಾಪ ಬೇಡ. ಸೂಕ್ಷ್ಮ ವಿಚಾರದ ಬಗ್ಗೆ ಇಲ್ಲಿ ಚರ್ಚೆ ಬೇಡ’ ಎಂದಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಪವನ್ ಕಲ್ಯಾಣ್, ‘ತಿರುಪತಿ ಬಗ್ಗೆ ಯಾವುದೇ ನಕಾರಾತ್ಮಕ ‌ಹೇಳಿಕೆ ಸಹಿಸಲ್ಲ‌.‌ ಒಂದೋ ನಟರು ಸುಮ್ಮನಿರಬೇಕು. ಇಲ್ಲವೇ ದೇಗುಲವನ್ನು ‌ಬೆಂಬಲಿಸಬೇಕು’ ಎಂದಿದ್ದರು. ಇದರ ಬೆನ್ನಲ್ಲೇ ಪವನ್‌‌ ಕಲ್ಯಾಣ್ ಅವರಲ್ಲಿ ಕಾರ್ತಿ ಕ್ಷಮೆ ಕೋರಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾರ್ತಿ, ‘ಆತ್ಮೀಯ ಪವನ್ ಕಲ್ಯಾಣ್ ಸರ್.. ನಿಮ್ಮ ಬಗ್ಗೆ ನಮಗೆ ತುಂಬಾ ಗೌರವವಿದೆ. ನನ್ನಿಂದ ಉಂಟಾದ ಯಾವುದೇ ಉದ್ದೇಶಪೂರ್ವಕ ತಪ್ಪುಗ್ರಹಿಕೆಗೆ ನಾನು ಕ್ಷಮೆಯಾಚಿಸುತ್ತೇನೆ. ವೆಂಕಟೇಶ್ವರ ಸ್ವಾಮಿಯ ವಿನಮ್ರ ಭಕ್ತನಾಗಿ, ನಾನು ಯಾವಾಗಲೂ ನಮ್ಮ ಸಂಪ್ರದಾಯಗಳನ್ನು ಆತ್ಮೀಯವಾಗಿ ಹಿಡಿದಿಟ್ಟುಕೊಳ್ಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

https://x.com/Karthi_Offl/status/1838480559925870662?ref_src=twsrc%5Etfw%7Ctwcamp%5Etweetembed%7Ctwterm%5E1838480559925870662%7Ctwgr%5Ec71e5b00de50f37675e311c7749b29c0f8a42280%7Ctwcon%5Es1_c10&ref_url=https%3A%2F%2Fwww.indiatoday.in%2Fmovies%2Fregional-cinema%2Fstory%2Ftirupati-laddu-controversy-karthi-pawan-kalyan-clash-2605499-2024-09-24

Ad
Ad
Nk Channel Final 21 09 2023