Ad

ವಯನಾಡು ಸಂತ್ರಸ್ತರಿಗೆ ಸರ್ಕಾರದ ಜೊತೆ ಕರುನಾಡ ಜನರಿಂದಲೂ ಸಹಾಯ ಹಸ್ತ

ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸುತ್ತಲೇ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಕರ್ನಾಟಕ  ಓಡೋಡಿ ಬಂದಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಯನಾಡಿನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ

ಬೆಂಗಳೂರು: ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸುತ್ತಲೇ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಕರ್ನಾಟಕ  ಓಡೋಡಿ ಬಂದಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಯನಾಡಿನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೂರು ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಭರವಸೆ ನೀಡಿದ್ದಾರೆ. ಇದರೊಂದಿಗೆ ರಾಜ್ಯದ ಕೈಗಾರಿಕೋದ್ಯಮಿಗಳು, ಖಾಸಗಿ ಸಂಘ ಸಂಸ್ಥೆಗಳೂ ಕೂಡ ವಿವಿಧ ರೂಪದಲ್ಲಿ ನೆರವಾಗಲು ಮುಂದಾಗಿವೆ.

ಏನೆಲ್ಲ ನೆರವು,

ಮೈಸೂರು ಜಿಲ್ಲಾಡಳಿತವು ವೈದ್ಯರ ತಂಡದೊಂದಿಗೆ 15 ಫ್ರೀಜರ್‌ ಬಾಕ್ಸ್‌ಗಳು, ನಾಲ್ಕು ಟ್ರಾಕ್ಟರ್‌ ಮೌಂಟೆಡ್‌ ಕಂಪ್ರೆಸರ್‌ ಮತ್ತು ಜಾಕ್‌ ಹ್ಯಾಮರ್‌, 500 ಬಾಡಿ ಬ್ಯಾಗ್‌ಗಳು, ತುರ್ತು ಸಂದರ್ಭಗಳಲ್ಲಿ ಬಳಸುವ 15 ದೀಪಗಳ ವ್ಯವಸ್ಥೆ, 40 ಸ್ಟ್ರೆಚರ್‌ಗಳು, 288 ಗಮ್‌ಬೂಟ್‌ಗಳು, 5 ಸ್ಟೀಲ್‌ ಕಟ್ಟರ್‌ಗಳು, 10 ಗ್ಯಾಸ್‌ ಕಟ್ಟರ್‌ಗಳು, 2040 ನ್ಯಾಪ್‌ಕಿನ್‌ಗಳು, 1000 ಗ್ಲೋವ್‌ಗಳು, 2050 ಮಾಸ್ಕ್‌ಗಳು, 1000 ಬಾಟಲ್‌ ಸ್ಯಾನಿಟೈಸರ್‌ಗಳು ಹಾಗೂ ಆರೋಗ್ಯ ಇಲಾಖೆಯ ಔಷಧಗಳನ್ನು ಒದಗಿಸಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (KIAL) ವತಿಯಿಂದ 250 ಎಂ.ಎಲ್‌. ನ 1008 ನೀರಿನ ಬಾಟಲ್‌ಗಳು, 100 ರೇನ್‌ಕೋಟ್‌ಗಳು, 500 ಬಾಟಲ್‌ ಸ್ಯಾನಿಟೈಸರ್‌ಗಳು, 15 ಟೆಂಟ್‌ಗಳು, 1000 ಪಿಪಿಇ ಕಿಟ್‌ಗಳು, 5000 ಗ್ಲೋವ್‌ಗಳು, 3೦೦೦ 3- ಪ್ಲೈ ಮಾಸ್ಕ್‌ಗಳು ಹಾಗೂ 8000 N-95 ಮಾಸ್ಕ್‌ಗಳನ್ನು ಕಳುಹಿಸಲಾಗಿದೆ.

ವೋಲ್ವೋ ಸಂಸ್ಥೆಯಿಂದ 2000 ಪ್ಯಾಕ್‌ ಸ್ಯಾನಿಟರಿ ಪ್ಯಾಡ್‌ಗಳು, 100 PPE ಕಿಟ್‌ಗಳು ಹಾಗೂ ಎರಡು ಟ್ರಕ್‌ಗಳನ್ನು ಒದಗಿಸಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕಾ ಸಂಘ(ELCIA) ದ ಸದಸ್ಯ ಸಂಸ್ಥೆಗಳು ಮತ್ತು ಪ್ರಣವ್‌ ಫೌಂಡೇಷನ್‌ ವತಿಯಿಂದ 40 ಸ್ಟ್ರೆಚರ್‌ಗಳು, 250 ಬಾಡಿ ಬ್ಯಾಗ್‌ಗಳು, 1000 N-95 ಮಾಸ್ಕ್‌ಗಳು, 500 ಬಾಟಲ್‌ ಸ್ಯಾನಿಟೈಸರ್‌ಗಳು, 1000 ಗ್ಲೋವ್‌ಗಳನ್ನು ಒದಗಿಸಲಾಗಿದೆ.

ಬಯೋಕಾನ್‌ ಮತ್ತು ಭಾಗೀದಾರ ಸಂಸ್ಥೆಗಳಾದ ನಾರಾಯಣ ಹೆಲ್ತ್‌ ಮತ್ತು ಸಿಂಜೀನ್‌ ಸಂಸ್ಥೆಗಳಿಂದ 2,200 ಮಾಸ್ಕ್‌ಗಳು, 100 ಗುಣಮಟ್ಟದ ರೇನ್‌ ಕೋಟ್‌ಗಳು, 400 ಲೀಟರ್‌ ಸ್ಯಾನಿಟೈಸರ್‌, 5 ಕಾರ್ಟನ್‌ಗಳಷ್ಟು ಬೆಡ್‌ಶೀಟ್‌ ಮತ್ತು ಬಟ್ಟೆ ಹಾಗೂ 250 ಪಿಪಿಇ ಕಿಟ್‌ಗಳನ್ನು ಕಳುಹಿಸಲಾಗಿದೆ.

ಆಶಯ ಟ್ರಸ್ಟ್ ಹಾಗೂ ಉತ್ತಿಷ್ಠ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ 1,000 ಬ್ಲಾಂಕೆಟ್‌ ಮತ್ತು ಟಾರ್ಪಾಲಿನ್‌ಗಳು ಹಾಗೂ ಎರಡು ಆಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಅವರು 25 ಲಕ್ಷ ರೂ. ಆರ್ಥಿಕ ನೆರವು ಒದಗಿಸಿದ್ದಾರೆ. ವಯನಾಡಿಗೆ ಪರಿಹಾರ ಸಾಮಗ್ರಿಗಳು, ವೈದ್ಯಕೀಯ ಸಲಕರಣೆಗಳು ಮತ್ತಿತರ ನೆರವು ಒದಗಿಸಿ ಮಾನವೀಯತೆ ಮೆರೆದ ಎಲ್ಲ ಸಂಸ್ಥೆಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

Ad
Ad
Nk Channel Final 21 09 2023