Bengaluru 29°C
Ad

ಅತ್ಯಾಚಾರ, ಕೊಲೆಯನ್ನೂ ಬೆಂಬಲಿಸುವಿರಾ? ಕುಲ್ವಿಂದರ್ ಪರ ನಿಂತವರ ವಿರುದ್ಧ ಕಂಗನಾ ಕಿಡಿ

ಬಿಜೆಪಿ ನೂತನ ಸಂಸದೆ ಕಂಗನಾ ರಣಾವತ್‌ಗೆ ಏರ್‌ಪೋರ್ಟ್‌ನಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದು ಈ ಘಟನೆಯಿಂದ ಕಂಗನಾಗೆ ಅವಮಾನವಾಗಿದೆ. ಈ ವಿಚಾರದಲ್ಲಿ ದಿನಕ್ಕೊಂದು ಹೊಸ ಪ್ರತಿಕ್ರಿಯೆಗಳು ಬರುತ್ತಿವೆ. ಕಂಗನಾ ಕಪ್ಪಾಳಕ್ಕೆ ಹೊಡೆದ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್‌ ಕುಲ್ವಿಂದರ್ ಕೌರ್ ಪರವಾಗಿ ನಿಂತ ಕೆಲವರ ವಿರುದ್ಧ ಖಡಕ್‌ ಉತ್ತರ ನೀಡಿದ್ದಾರೆ.

ಈ ಘಟನೆ ನಂತರ ಕೆಲ ಸೆಲಬ್ರಿಟಿಗಳು ಕೂಡ ಸಿಬ್ಬಂದಿ ಮಹಿಳ ಪರವಾಗಿ ಪೋಸ್ಟ್‌ಮಾಡಿದ್ದರು. ಇದರಿಂದ ಕೋಪಗೊಂಡಿರುವ ಕಂಗನಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಖಡಕ್‌ ಉತ್ತರ ನೀಡಿದ್ದಾರೆ. ಪ್ರತಿಕ್ರಿಯೆ ನೀಡಿರುವ ಅವರು, ಪ್ರತಿಯೊಬ್ಬ ಅತ್ಯಾಚಾರಿ, ಕೊಲೆಗಾರ ಅಥವಾ ಕಳ್ಳ ಯಾವಾಗಲೂ ಅಪರಾಧ ಮಾಡುವ ಹಿಂದೆ ಬಲವಾದ ಭಾವನಾತ್ಮಕ, ದೈಹಿಕ, ಮಾನಸಿಕ ಅಥವಾ ಆರ್ಥಿಕ ಕಾರಣವನ್ನು ಹೊಂದಿರುತ್ತಾನೆ. ಕಾರಣವಿಲ್ಲದೆ ಯಾರೂ ಯಾವುದೇ ಅಪರಾಧವನ್ನು ಮಾಡುವುದಿಲ್ಲ, ಆದರೂ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಜೈಲಿಗೆ ಹಾಕಲಾಗುತ್ತದೆ’’ ಎಂದು ಬರೆದಿದ್ದಾರೆ.

‘ನೆನಪಿಡಿ, ಯಾರೊಬ್ಬರ ದೇಹವನ್ನು ಸ್ಪರ್ಶಿಸುವುದು ಮತ್ತು ಅವರ ಮೇಲೆ ಹಲ್ಲೆ ಮಾಡುವುದನ್ನು ನೀವು ಒಪ್ಪಿದರೆ, ನೀವು ಅತ್ಯಾಚಾರ ಅಥವಾ ಕೊಲೆಯನ್ನು ಸಹ ಬೆಂಬಲಿಸಿದಂತೆಯೇ. ಯೋಗ ಮತ್ತು ಧ್ಯಾನ ಮಾಡಲು ನಾನು ನಿಮಗೆ ಸಲಹೆ ನೀಡುತ್ತೇನೆ. ಯಾರ ಮೇಲೂ ಇಷ್ಟೊಂದು ಕೋಪ, ದ್ವೇಷ, ಅಸೂಯೆ ಇಟ್ಟುಕೊಳ್ಳಬೇಡಿ, ನಿಮ್ಮನ್ನು ಉದ್ಧಾರ ಮಾಡಿಕೊಳ್ಳಿ.’’ ಎಂದು ಕಂಗನಾ ಎಲ್ಲರನ್ನೂ ಟಾರ್ಗೆಟ್ ಮಾಡಿದ್ದಾರೆ. ಕಂಗನಾ ಈ ಪೋಸ್ಟ್ ವೈರಲ್ ಆಗಿದೆ.

Ad
Ad
Nk Channel Final 21 09 2023
Ad