ಪುಣೆ: ಹಾಡಹಗಲೇ ಮೂವರು ವ್ಯಕ್ತಿಗಳು ಬಂದೂಕು ತೋರಿಸಿ ಆಭರಣ ಅಂಗಡಿಯನ್ನು ಲೂಟಿ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. ಘಟನೆ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದರೋಡೆಕೋರರು ಅಂಗಡಿಗೆ ನುಗ್ಗಿ ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ.
ವಿಡಿಯೊದಲ್ಲಿ, ದರೋಡೆಕೋರರಲ್ಲಿ ಒಬ್ಬರು ಅಂಗಡಿಯೊಳಗಿನ ವ್ಯಕ್ತಿಯ ಮೇಲೆ ಬಂದೂಕನ್ನು ಗುರಿಯಾಗಿಸಿಕೊಂಡರೆ, ಇನ್ನೊಬ್ಬ ವ್ಯಕ್ತಿಯ ಕಾಲರ್ ಹಿಡಿದು ಕೆಳಕ್ಕೆ ತಳ್ಳುತ್ತಿದ್ದಾನೆ. ಮೂರನೆಯವನು ಅಂಗಡಿಯೊಳಗೆ ಇದ್ದ ವಸ್ತುಗಳನ್ನು ತೆಗೆದುಕೊಂಡಿದ್ದಾನೆ ಮತ್ತು ನಂತರ, ಮೂವರು ಅಂಗಡಿಯಿಂದ ಹೊರಗೆ ಹೋಗಿದ್ದಾರೆ.
ಪುಣೆಯ ಲಕ್ಷ್ಮಿ ಚೌಕ್ ಹಿಂಜೇವಾಡಿಯಲ್ಲಿ ಬೆಳಿಗ್ಗೆ 10:30 ಕ್ಕೆ ಈ ಘಟನೆ ನಡೆದಿದ್ದು, ಕೆಲವೇ ಸೆಕೆಂಡುಗಳಲ್ಲಿ ದರೋಡೆಕೋರರು ಅಂಗಡಿಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಜಾಗ ಖಾಲಿ ಮಾಡಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಪೊಲೀಸರು ಅದನ್ನು ಪರೀಶಿಲಿಸಿ ಕಳ್ಳರನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
https://x.com/lokmattimeseng/status/1819305224286212499?
.