ನವದೆಹಲಿ: ಭಾರತೀಯ ಜನತಾ ಪಾರ್ಟಿ 240 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಮತ್ತೆ ಗದ್ದುಗೆ ಏರಲು ಸಿದ್ಧವಾಗಿದ್ದು, ಮೋದಿ ಜಯಗಳಿಸಿರುವ ಸಂಗತಿ ಕೇಳಿ ಇಟಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ಅಭಿನಂದನೆ ಸಲ್ಲಿಸಿದ್ದಾರೆ.
ಜಾರ್ಜಿಯಾ ಮೆಲೋನಿಯವರು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ‘‘ಹೊಸ ಚುನಾವಣಾ ವಿಜಯಕ್ಕಾಗಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಮತ್ತು ಉತ್ತಮ ಕೆಲಸಕ್ಕಾಗಿ ನನ್ನ ಆತ್ಮೀಯ ಶುಭಾಶಯಗಳು. ನಾವು ಇಟಲಿ ಮತ್ತು ಭಾರತವನ್ನು ಒಂದುಗೂಡಿಸುವ ಸ್ನೇಹವನ್ನು ಬಲಪಡಿಸಲು ಮತ್ತು ವಿವಿಧ ವಿಷಯಗಳಲ್ಲಿ ಸಹಕಾರವನ್ನು ಕ್ರೋಢೀಕರಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಖಚಿತವಾಗಿದೆ. ನಮ್ಮ ರಾಷ್ಟ್ರ ಮತ್ತು ನಮ್ಮ ಜನರ ಯೋಗಕ್ಷೇಮಕ್ಕಾಗಿ ಶ್ರಮಿಸೋಣ’’ ಎಂದು ಬರೆದುಕೊಂಡಿದ್ದಾರೆ.
Congratulazioni a @narendramodi per la nuova vittoria elettorale e i miei auguri più affettuosi di buon lavoro. Certa che continueremo a lavorare insieme per rafforzare l’amicizia che unisce Italia e India e consolidare la cooperazione sui diversi temi che ci legano, per il… pic.twitter.com/v5XJAqkwOz
— Giorgia Meloni (@GiorgiaMeloni) June 4, 2024