ತೆಲಂಗಾಣ: ಬ್ರಿಟಾನಿಯಾ ಬೌರ್ಬನ್ ಬಿಸ್ಕತ್‌ನೊಳಗೆ ತೆಳುವಾದ ಕಬ್ಬಿಣದ ತಂತಿಯೊಂದು ಕಂಡು ಬಂದಿರುವ ಆಘಾತಕಾರಿ ಘಟನೆ ತೆಲಂಗಾಣದ ಕಾಮರೆಡ್ಡಿಯ ಹಳ್ಳಿಯೊಂದರಲ್ಲಿ ನಡೆದಿದೆ. ಈ ಘಟನೆಯನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಿಸ್ಕೆಟ್‌ನಲ್ಲಿ ತೆಳುವಾದ ತಂತಿಯೊಂದಿರುವುದು ವಿಡಿಯೋದಲ್ಲಿ ಕಾಣಬಹುದು.
ಕಾಮರೆಡ್ಡಿ ಜಿಲ್ಲೆಯ ದೇವುನಿಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಹನುಮಾನ್ ರೆಡ್ಡಿ ಎಂದು ಗುರುತಿಸಲಾಗಿದೆ. ತಾನು ಸ್ಥಳೀಯ ಅಂಗಡಿಯೊಂದರಿಂದ ಮಕ್ಕಳಿಗಾಗಿ ಬೌರ್ಬನ್ ಬಿಸ್ಕತ್ತು ಖರೀದಿಸಿ ತಂದಿದೆ. ಆದರೆ ಮಕ್ಕಳು ತಿನ್ನುವಾಗ ಬಿಸ್ಕತ್ತಿನಲ್ಲಿ ತೆಳುವಾದ ಕಬ್ಬಿಣದ ತಂತಿಯೊಂದು ಇರುವುದು ಕಂಡುಬಂದಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
Ad