ನವದೆಹಲಿ: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಾವಿತ್ರಿ ಅವರು ಬಿಜೆಪಿಯ ಕಮಲ್ ಗುಪ್ತಾ ವಿರುದ್ಧ 18,941 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್‌ನಿಂದ ರಾಮ್ ನಿವಾಸ್ ರಾರಾ ಸ್ಪರ್ಧಿಸಿದ್ದರು.
ಹಿಸಾರ್‌ನ ಜನರಿಗೆ ಕೃತಜ್ಞತೆ ವ್ಯಕ್ತಪಡಿಸಿರುವ ಸಾವಿತ್ರಿ ಜಿಂದಾಲ್ ಅವರು, ಹಿಸಾರ್ ಕುಟುಂಬಕ್ಕೆ ಕೃತಜ್ಞತೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಿಂದಾಲ್ ಕುಟುಂಬದ 74 ವರ್ಷದ ಸಾವಿತ್ರಿ ಅವರು ಈಗ ಮೂರನೇ ಬಾರಿಗೆ ಹಿಸಾರ್‌ನಲ್ಲಿ ಗೆದ್ದಿದ್ದಾರೆ.
ಸಾವಿತ್ರಿ ಜಿಂದಾಲ್ ಅವರ ವೈಯಕ್ತಿಕ ಸಂಪತ್ತು 3.65 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಹೀಗಾಗಿ ಅವರು ಭಾರತದ ಶ್ರೀಮಂತ ಮಹಿಳೆಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅವರು ದೇಶದ ಐದನೇ-ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಹೊಂದಿದ್ದಾರೆ.
https://x.com/SavitriJindal/status/1843568677045916123?