Bengaluru 22°C
Ad

ಭಯೋತ್ಪಾದನೆ ನಿಲ್ಲಿಸಿದರೆ ಪಾಕ್ ಜೊತೆ ಭಾರತ ಮಾತುಕತೆಗೆ ಸಿದ್ಧ: ರಾಜನಾಥ್ ಸಿಂಗ್

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪ್ರಾಯೋಜಕತ್ವ ನಿಲ್ಲಿಸಿದರೆ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಲು ಭಾರತ ಸಿದ್ಧವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪ್ರಾಯೋಜಕತ್ವ ನಿಲ್ಲಿಸಿದರೆ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಲು ಭಾರತ ಸಿದ್ಧವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಹಿನ್ನೆಲೆ ಇಲ್ಲಿನ ರಾಂಬನ್‌ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಇದೇ ವೇಳೆ ರಾಂಬನ್‌ ಜಿಲ್ಲೆಯ ಬನಿಹಾಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೊಹಮ್ಮದ್‌ ಸಲೀಂ ಭಟ್‌ ಪರ ಮತಯಾಚನೆ ನಡೆಸಿದರು. ನಾವು ಯಾವುದೇ ಸಂದರ್ಭದಲ್ಲೂ ಭಯೋತ್ಪಾದಕ ಚಟುವಟಿಕೆಗಳನ್ನು ಭಾರತ ಒಪ್ಪಿಕೊಳ್ಳುವುದಿಲ್ಲ. ಕೆಲವರು ಪಾಕಿಸ್ತಾನದೊಂದಿಗೆ ಮಾತುಕತೆಯ ಬಗ್ಗೆ ಮಾತನಾಡುತ್ತಾರೆ.

ನಾನು ಹೇಳುತ್ತೇನೆ, ಪಾಕಿಸ್ತಾನ ಒಂದು ಕೆಲಸ ಮಾಡಬೇಕು, ಭಯೋತ್ಪಾದನೆಯನ್ನು ಆಶ್ರಯಿಸುವುದನ್ನು ನಿಲ್ಲಿಸಬೇಕು. ನೆರೆಯ ರಾಷ್ಟ್ರದೊಂದಿಗೆ ಸಂಬಂಧವನ್ನು ಸುಧಾರಿಸಲು ಯಾರೂ ಬಯಸುವುದಿಲ್ಲ. ಏಕೆಂದರೆ ಅದರ ವಾಸ್ತವತೆ ನನಗೆ ತಿಳಿದಿದೆ. ನಾವು ಪಾಕಿಸ್ತಾನದೊಂದಿಗೆ ಸುಧಾರಿತ ಸಂಬಂಧ ಬಯಸುತ್ತೇವೆ. ಆದರೆ ಅದಕ್ಕೂ ಮುನ್ನ ಅವರು ಭಯೋತ್ಪಾದನೆ ನಿಲ್ಲಿಸಬೇಕು ಎಂದು ಹೇಳಿದ್ದಾರೆ.

 

 

 

Ad
Ad
Nk Channel Final 21 09 2023