ಅಮರಾವತಿ: ಬಡವರಿಗೆ 5 ರೂ.ಗೆ ಅನ್ನ ನೀಡುವ ಅನ್ನ ಕ್ಯಾಂಟೀನ್‌ಗಳು ಆಂಧ್ರಪ್ರದೇಶದಲ್ಲಿ ಮತ್ತೆ ಪುನಾರಂಭಗೊಂಡಿದೆ. ಟಿಡಿಪಿಯ ಹಿಂದಿನ ಆಡಳಿತದಲ್ಲಿ ಪ್ರಾರಂಭಿಸಲಾದ ಕ್ಯಾಂಟೀನ್‌ಗಳನ್ನು ವೈಎಸ್‌ಆರ್‌ಸಿಪಿ ಸರ್ಕಾರವು 2019 ಮತ್ತು 2024 ರ ನಡುವೆ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಅಧಿಕಾರದಲ್ಲಿರುವ ಟಿಡಿಪಿ ಈ ಕ್ಯಾಂಟೀನ್‌ಗಳನ್ನು ಮರುಪ್ರಾರಂಭಿಸಿದೆ.
ಗುಡಿವಾಡದಲ್ಲಿ ಅನ್ನ ಕ್ಯಾಂಟೀನ್‌ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಬಡವರು ಹಸಿವಿನಿಂದ ಬಳಲಬಾರದು ಎಂಬುದು ಈ ಕ್ಯಾಂಟೀನ್‌ಗಳ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಅನ್ನ ಕ್ಯಾಂಟೀನ್‌ನ ಊಟಕ್ಕೆ 5 ರೂ. ಬಡವರಿಗೆ, ದಿನಗೂಲಿದಾರರಿಗೆ ಮತ್ತು ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
‘ಬಡವರ ಖಾಲಿ ಹೊಟ್ಟೆಯನ್ನು ತುಂಬಿಸುವುದಕ್ಕಿಂತ ತೃಪ್ತಿಕರವಾದ ಮತ್ತೊಂದು ಕೆಲಸ ಯಾವುದಿದೆ’ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಜಗನ್ ಮೋಹನ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಚಂದ್ರಬಾಬು ನಾಯ್ಡು ಮತ್ತು ಅವರ ಪತ್ನಿ ನಾರಾ ಭುವನೇಶ್ವರಿ ಗುಡಿವಾಡದಲ್ಲಿ ಅನ್ನ ಕ್ಯಾಂಟೀನ್‌ಗೆ ಚಾಲನೆ ನೀಡಿದ ನಂತರ ಸಾಮಾನ್ಯ ನಾಗರಿಕರೊಂದಿಗೆ ಊಟ ಮಾಡಿದರು. ಈ ಕ್ಯಾಂಟೀನ್‌ಗಳನ್ನು ಶಾಶ್ವತವಾಗಿ ಮತ್ತು ಯಾವುದೇ ಅಡೆತಡೆಗಳಿಲ್ಲದೆ ನಿರ್ವಹಿಸಲು ಕ್ರಿಯಾ ಯೋಜನೆ ರೂಪಿಸುವುದಾಗಿ ಘೋಷಿಸಿದ್ದಾರೆ.
ರಾಜ್ಯದಾದ್ಯಂತ ಇಂತಹ 203 ಕ್ಯಾಂಟೀನ್‌ಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ದೈನಂದಿನ ನಿರ್ವಹಣೆ ವೆಚ್ಚ 53 ಲಕ್ಷ ರೂ. ನೀಡಲಾಗುವುದು. ಟಿಡಿಪಿ ಸಂಸ್ಥಾಪಕ, ದಿವಂಗತ ಎನ್‌ಟಿ ರಾಮರಾವ್ ಮತ್ತು ಜನಪ್ರಿಯ ಡೊಕ್ಕಾ ಸೀತಮ್ಮ ಅವರಿಂದ ಪ್ರೇರಿತವಾದ ಅನ್ನ ಕ್ಯಾಂಟೀನ್‌ಗಳಿಗೆ ಹೆಚ್ಚಿನ ಸಂಖ್ಯೆಯ ದೇಣಿಗೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.