Bengaluru 21°C
Ad

ದನದ ಕೊಟ್ಟಿಗೆ ಸ್ವಚ್ಛಗೊಳಿಸಿ ಅಲ್ಲಿ ಮಲಗಿದರೆ ಕ್ಯಾನ್ಸರ್‌ ರೋಗ ಗುಣಮುಖ: ಸಂಜಯ್ ಸಿಂಗ್ ಗಂಗ್ವಾರ್

ಕ್ಯಾನ್ಸರ್‌ ರೋಗಿಗಳು ದನದ ಕೊಟ್ಟಿಗೆ ಸ್ವಚ್ಛಗೊಳಿಸಿ ಅಲ್ಲಿ ಮಲಗುವುದರಿಂದ ಕ್ಯಾನ್ಸರ್‌ ರೋಗ ಗುಣಮುಖವಾಗುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿದರು.

ಲಕ್ನೋ: ಕ್ಯಾನ್ಸರ್‌ ರೋಗಿಗಳು ದನದ ಕೊಟ್ಟಿಗೆ ಸ್ವಚ್ಛಗೊಳಿಸಿ ಅಲ್ಲಿ ಮಲಗುವುದರಿಂದ ಕ್ಯಾನ್ಸರ್‌ ರೋಗ ಗುಣಮುಖವಾಗುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿದರು.

ಕಬ್ಬು ಬೆಳೆ ಅಭಿವೃದ್ಧಿಯ ಸಚಿವ ಗಂಗ್ವಾರ್, ಭಾನುವಾರ ತಮ್ಮ ಕ್ಷೇತ್ರವಾದ ಪಿಲಿಭಿತ್‌ನ ಪಕಾಡಿಯಾ ನೌಗಾವಾನ್‌ನಲ್ಲಿ ಗೋಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆ ನೀಡಿದರು.

ಹಸುಗಳಿಗೆ ಮೇವು ನೀಡಿ ಸಾಕುವುದರಿಂದ ರಕ್ತದೊತ್ತಡ ಸಮಸ್ಯೆಯು ಕೇವಲ 10 ದಿನಗಳಲ್ಲಿ ಅರ್ಧದಷ್ಟು ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ. ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಮಕ್ಕಳ ಜನ್ಮದಿನವನ್ನು ಗೋಶಾಲೆಗಳಲ್ಲಿ ಆಚರಿಸುವಂತೆ ಸಚಿವರು ಇದೇ ವೇಳೆ ಒತ್ತಾಯಿಸಿದ್ದಾರೆ.

Ad
Ad
Nk Channel Final 21 09 2023