ಶ್ರೀನಗರ: ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತೆಯೊಬ್ಬಳಿಗೆ ಜೀವಬೆದರಿಕೆ ಇಟ್ಟಿರುವ ಆಘಾತಕಾರಿ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯರ ಅಭಿಪ್ರಾಯಗಳನ್ನು ಪಡೆದುಕೊಳ್ಳಲು ಪತ್ರಕರ್ತೆ ಹೋಗಿದ್ದರು. ಈ ವೇಳೆ ಮುಷ್ತಾಕ್ ಎಂಬ ವ್ಯಕ್ತಿ ಇಲ್ಲಿ ದೇವಾಲಯಗಳನ್ನು ಕಟ್ಟಿದರೆ ನಾವು ಅದಕ್ಕೆ ಬೆಂಕಿ ಇಡುತ್ತೇವೆ ಎಂದಿದ್ದಾನೆ.
ನಮ್ಮ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿರುವುದನ್ನು ನಾನು ಒಪ್ಪಲಾರೆ. ಒಂದು ವೇಳೆ ದೇವಾಲಯ ನಿರ್ಮಿಸಿದರೆ ಅದನ್ನು ನಾನು ಸುಟ್ಟು ಬಿಡುತ್ತೇನೆ. ನಾನೊಬ್ಬ ಮುಸಲ್ಮಾನನಾಗಿದ್ದು, ಅಧರ್ಮಿಗಳ ನಡುವೆ ಬದುಕುವುದು ಕಷ್ಟವಾಗುತ್ತದೆ. ಅದನ್ನು ಒಪ್ಪಲು ನನ್ನಿಂದ ಸಾಧ್ಯವಿಲ್ಲ.
ಇಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಇಲ್ಲಿ ಬಿಜೆಪಿಗರು ಮಸೀದಿಗಳ ಮುಂದೆ ದೇವಾಲಯಗಳನ್ನು ನಿರ್ಮಿಸಲು ಪ್ರಾರಂಭಿಸಿದಾಗಿನಿಂದ ಅವರು ನಮ್ಮ ಧರ್ಮದ ತತ್ವಗಳಿಗೆ ವಿರುದ್ಧವಾಗಿ ಮದ್ಯದ ಅಂಗಡಿಗಳನ್ನು ಸಹ ತೆರೆಯಲು ಪ್ರಾರಂಭಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಈ ವರದಿಯನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ ಪತ್ರಕರ್ತೆಗೆ ಜೀವ ಬೆದರಿಕೆಗಳು ಬಂದಿವೆ. ಕೆಲವರು ಆಕೆಯ ವಿರುದ್ಧ ತಿರುಗಿಬಿದ್ದಿದ್ದು, ಇಂತಹ ಸಂಕುಚಿತ ಮನಸ್ಸಿನ ಜನರ ಸಂದರ್ಶನಗಳನ್ನು ಆಯ್ದುಕೊಂಡು ಕಾಶ್ಮೀರಕ್ಕೆ ಕಳಂಕ ತರುವ ರೀತಿಯಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
https://x.com/ArchanaRajdharm/status/1837892314003325250?