ಈಶಾ ಫೌಂಡೇಶನ್ ಗೋಶಾಲೆಯನ್ನು ಕೂಡಾ ನಡೆಸಲಾಗುತ್ತದೆ. ಈ ಗೋಶಾಲೆಯಲ್ಲಿ 630ಕ್ಕೂ ಹೆಚ್ಚು ಸ್ಥಳೀಯ ತಳಿಯ ಹಸುಗಳು ಮತ್ತು ಗೂಳಿಗಳಿವೆ. ಅವುಗಳಲ್ಲಿ ಭೋಲಾ ಹೆಸರಿನ ವಿಶೇಷ ಗೂಳಿಯೂ ಒಂದು.
ಈ ಬಲಾಢ್ಯ ಗೂಳಿಯನ್ನು ನೋಡಲು ಕೂಡಾ ಹಲವಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ಈ ಗೂಳಿಗೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದ್ದು, ಯುವತಿಯೊಬ್ಬಳ ಭಜನೆ ಹಾಡನ್ನು ಕೇಳಿ ಈ ಬಲಾಢ್ಯ ಗೂಳಿ ಭಾವುಕವಾಗಿ ಕಣ್ಣೀರು ಸುರಿಸಿದೆ. ಈ ದೃಶ್ಯ ನೆಟ್ಟಿಗರ ಮನಗೆದ್ದಿದೆ.
ತುಂಬಾನೇ ಆಕ್ರಮಣಕಾರಿ ಸ್ವಭಾವನ್ನು ಹೊಂದಿದ್ದ ಈ ಬಲಾಢ್ಯ ಗೂಳಿಯನ್ನು ಗೋಶಾಲೆಗೆ ತಂದು ಬಿಟ್ಟ ಬಳಿಕ ಸದ್ಗುರುಗಳ ಆರೈಕೆಯಲ್ಲಿ ಇದು ಶಾಂತಿ ಮತ್ತು ತಾಳ್ಮೆಯನ್ನು ಕಲಿಯಿತು. ನಂತರ ಸದ್ಗುರು ಈ ಗೂಳಿಗೆ ʼಭೋಲಾʼ ಎಂಬ ನಾಮಕರಣವನ್ನು ಮಾಡುತ್ತಾರೆ. ಹೀಗೆ ಗೋಶಾಲೆಗೆ ಬಂದ ಭೋಲಾ ನಂತರದಲ್ಲಿ ಎಲ್ಲರೊಂದಿಗೂ ದಯೆ ಮತ್ತು ತಾಳ್ಮೆಯಿಂದ ವರ್ತಿಸಲು ಪ್ರಾರಂಭಿಸಿತು. ಈ ಭೋಲಾನನ್ನು ನೋಡಲೆಂದೇ ಸಾವಿರಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ʼಭೋಲಾʼ ಗೂಳಿಯ ಮೃದು ಮನಸ್ಸಿಗೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದೆ.
https://www.instagram.com/p/C-WxIEbymQ7/