Ad

IAS ಆಕಾಂಕ್ಷಿ ಡೆತ್​​ನೋಟ್​​ ಬರೆದಿಟ್ಟು ಆತ್ಮಹತ್ಯೆಗೆ ಶರಣು!

ಭಾರತೀಯ ಆಡಳಿತ ಸೇವೆಯ ಆಕಾಂಕ್ಷಿಯೊಬ್ಬರು ರೂಮ್​ ಬಾಡಿಗೆ ಜಾಸ್ತಿ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿ ನಗರದ ರಾಜೀಂದ್ರ ನಗರದಲ್ಲಿ ನಡೆದಿದೆ.

ನವದೆಹಲಿ: ಭಾರತೀಯ ಆಡಳಿತ ಸೇವೆಯ ಆಕಾಂಕ್ಷಿಯೊಬ್ಬರು ರೂಮ್​ ಬಾಡಿಗೆ ಜಾಸ್ತಿ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿ ನಗರದ ರಾಜೀಂದ್ರ ನಗರದಲ್ಲಿ ನಡೆದಿದೆ.

ಮಹಾರಾಷ್ಟ್ರ ಅಕೋಲಾ ನಗರದ ಅಂಜಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ಕಳೆದ ಕೆಲ ವರ್ಷಗಳಿಂದ ಐಎಎಸ್​ ಪರೀಕ್ಷೆಗಾಗಿ ರಾಜೀಂದ್ರ ನಗರದ ಬಾಡಿಗೆ ಮನೆಯಲ್ಲಿ ಇದ್ದರು. ಖಿನ್ನತೆ ಹಾಗೂ ಜೀವನದ ಹಿಂಜರಿಕೆಯಿಂದಾಗಿ, ಜೀವನ ಸಾಗಿಸಲು ಕಷ್ಟ ಆಗಿದೆಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡೆತ್​​ನೋಟ್​​ನಲ್ಲಿ ಸರ್ಕಾರಿ ಪರೀಕ್ಷೆಗಳಲ್ಲಿನ ಹಗರಣಗಳನ್ನು ಕಡಿಮೆ ಮಾಡಿ. ದೇಶದಲ್ಲಿ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದ್ದಕ್ಕಿದ್ದಾಗೆ ಮನೆ ಬಾಡಿಗೆಯನ್ನು ಹೆಚ್ಚಳ ಮಾಡಿದ್ದರಿಂದ ರೆಂಟ್​ ಕಟ್ಟಲಾಗದೇ ಐಎಎಸ್​ ಆಕಾಂಕ್ಷಿ ಒತ್ತಡಕ್ಕೆ ಒಳಗಾಗಿ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಅಂಜಲಿ ತಿಂಗಳಿಗೆ 15,000 ರೂ.ಗಳನ್ನು ಬಾಡಿಗೆ ಕಟ್ಟುತ್ತಿದ್ದರು. ಆದರೆ ಏಕಾಏಕಿ ಮನೆಯ ಮಾಲೀಕರು 3 ಸಾವಿರ ರೂ.ಗಳನ್ನು ಏರಿಕೆ ಮಾಡಿದ್ದರಿಂದ 18,000 ರೂಗಳನ್ನು ಕಟ್ಟಿತ್ತಿದ್ದಳು ಎಂದು ಮೃತಳ ಗೆಳತಿ ಹೇಳಿದ್ದಾರೆ. ಈ ಸಂಬಂಧ ರಾಜೀಂದ್ರ ನಗರದ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಡೆತ್​ನೋಟ್​ನಲ್ಲಿ ತಮ್ಮ ಅಪ್ಪ, ಅಮ್ಮಗೆ ಅಂಜಲಿ ಕ್ಷಮೆ ಕೇಳಿದ್ದಾಳೆ. ನನ್ನ ಚೆನ್ನಾಗಿಯೇ ನೀವು ಬೆಳೆಸಿದ್ದೀರಿ. ಆದರೆ ಈಗ ಜೀವನದಲ್ಲಿ ನಿಜವಾಗಿಯೂ ಬೇಸರಗೊಂಡಿದ್ದೇನೆ. ಸಮಸ್ಯೆಗಳೇ ಹೆಚ್ಚಾಗಿವೆ. ನನಗೆ ಶಾಂತಿ ಬೇಕು. ನನ್ನ ಖಿನ್ನತೆ ಶಮನಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟೆ ಆದರೆ ಸಾಧ್ಯವಾಗಲಿಲ್ಲ.

ಮೊದಲ ಪ್ರಯತ್ನದಲ್ಲೇ ಯುಪಿಎಸ್​​ಸಿ ಪಾಸ್​ ಮಾಡಬೇಕಿತ್ತು. ಅದು ಆಗಲಿಲ್ಲ. ನನ್ನ ಸಾವಿನ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗುವುದು ನನಗೆ ಗೊತ್ತಿದೆ. ಅದರೆ ನಾನು ಈ ಲೋಕ ಬಿಟ್ಟೇ ಹೋಗ್ತಿದ್ದೇನೆ. ಪಿಜಿ ಮತ್ತು ಹಾಸ್ಟೆಲ್​ ರೆಂಟ್​ ಕೂಡ ಜಾಸ್ತಿ ಮಾಡಿ ವಿದ್ಯಾರ್ಥಿಗಳಿಂದ ಎಲ್ಲರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಡೆತ್​​ನೋಟ್​ನಲ್ಲಿ ಬರೆದಿದ್ದಾರೆ.

Ad
Ad
Nk Channel Final 21 09 2023